Dec 15: ಮಕ್ಕಳಲ್ಲಿ ಸೇವಾ ಮನೋಭಾವನೆಯನ್ನು ಬೆಳೆಸುವ ಉದ್ದೇಶದಿಂದ ಮುಖ್ಯೋಪಾಧ್ಯಾಯಿನಿ ಹಾಗೂ ಶಿಕ್ಷಕರ ಸಹಕಾರದೊಂದಿಗೆ ಸಂತಜೋಸೆಫರ ಪ್ರೌಢಶಾಲೆಯಲ್ಲಿ “ಸಮಾಜ ಸೇವೆಯ ವಾರ” (Social Service week) ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂಬ ಉದ್ದೇಶದಿಂದ ಅಂದರೆ ವಿದ್ಯಾರ್ಥಿಗಳಿಂದ ದಿನ ಬಳಕೆಯ ಅವಶ್ಯಕ ವಸ್ತುಗಳನ್ನು ಹಾಗೂ ಹಣವನ್ನು ಸಂಗ್ರಹಿಸಿ ಅದನ್ನು ದೀನರು, ಬುದ್ದಿಮಾಂದ್ಯರಿಗೆ ನೀಡುವ ಯೋಜನೆಯನ್ನು ಹಾಕಿಕೊಳ್ಳಲಾಯಿತು. ಈ ಕಾರ್ಯಕ್ಕೆ ವಿದ್ಯಾರ್ಥಿಗಳು ದಿನಬಳಕೆಯ ವಸ್ತುಗಳನ್ನು, ತಿಂಡಿಗಳನ್ನು, ಬಟ್ಟೆಗಳನ್ನು ಹಾಗೂ ಹಣವನ್ನು ಉದಾರವಾಗಿ ತಂದುಕೊಟ್ಟು ಸಹಕರಿಸಿದರು.

ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು 11.12.2018 ರಂದು ಮುಖ್ಯಶಿಕ್ಷಕರಾದ ಸಿಸ್ಟರ್. ಬೆಟ್ಟಿ, ಶಿಕ್ಷಕರು ಹಾಗೂ ಮಕ್ಕಳೊಡಗೂಡಿ ಡೊರ್ನಹಳ್ಳಿಯಲ್ಲಿರುವ ಜೆ.ಎಂ.ಜೆ ಬುದ್ಧಿಮಾಂದ್ಯ ಮಕ್ಕಳ ವಸತಿಶಾಲೆ ಹಾಗೂ ವೃದ್ಧಾಶ್ರಮ ಪಲ್ಲೋಟಿ ಶಾಂತಿಧಾಮಕ್ಕೆ ಭೇಟಿ ನೀಡಲಾಯಿತು. ಮುಖ್ಯಶಿಕ್ಷಕರಾದ ಸಿಸ್ಟರ್. ಬೆಟ್ಟಿಯವರು  ಅಲ್ಲಿನ ಮಕ್ಕಳ ಹಾಗೂ ವೃದ್ಧರ ಕ್ಷೇಯೋಭಿವೃದ್ಧಿಗೆ ಪ್ರಾರ್ಥನೆ ಮಾಡಿದರು ನಮ್ಮ ಕೇಂದ್ರಿಯ ಮೌಲ್ಯಗಳಲ್ಲಿ ಒಂದಾದ ದೀನ ದಲಿತರಿಗೆ, ದುರ್ಬಲರಿಗೆ ಸಹಾಯ ಮಾಡಬೇಕೆನ್ನುವ ಮೌಲ್ಯವನ್ನು ಬೆಳೆಸಲು ಈ ಕಾರ್ಯಕ್ರಮ ಸಹಕಾರಿಯಾಗಿದೆಯೆಂದು ಹಾಗೂ  ಅಲ್ಲಿ ಸೇವೆ ಮಾಡುತ್ತಿರುವ ಭಗಿನಿಯರು ಹಾಗೂ ಶಿಕ್ಷಕವೃಂದದವರ ಸೇವಾಮನೋಭಾವವನ್ನು ಸ್ಮರಿಸಲಾಯಿತು. ನಮ್ಮ ಶಾಲೆಯ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮನ್ನು ನೀಡಲಾಯಿತು. ನಂತರ ಸಂಗ್ರಹಿಸಿದ ಪದಾರ್ಥಗಳನ್ನು ಅಲ್ಲಿನ ಬುದ್ಧಿಮಾಂದ್ಯ ಮಕ್ಕಳಿಗೆ, ವೃದ್ಧರಿಗೆ ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಪೋಷಕರಾದ ಆನಂದ್, ಕೃಷ್ಣೇಗೌಡ ರವರು ತುಂಬು ಹೃದಯದಿಂದ ತಮ್ಮ ವಾಹನದ ಸೌಕರ್ಯವನ್ನು ಓದಗಿಸಿಕೊಟ್ಟು ನಮ್ಮ ಈ ಕಾರ್ಯದಲ್ಲಿ ಭಾಗಿಯಾಗಿದ್ದgÀÄ.  

                              

 

 

 

 

 

 

 

 

ಶ್ರೀ. ಪ್ರಶಾಂತ, ಶಿಕ್ಷಕರು,        
ಸಂತ ಜೋಸೆಫರ ಪ್ರೌಢಶಾಲೆ,
ಕೃಷ್ಣರಾಜನಗರ, ಮೈಸೂರು ಜಿಲ್ಲೆ

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]