Jan 29: 70ನೇ ಗಣರಾಜ್ಯೋತ್ಸವದ ಅಂಗವಾಗಿ ಸಂತಜೋಸೆಫರ ಫ್ರೌಢಶಾಲೆಯ 8ನೇ ತರಗತಿಯ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ಶಾಲೆಯ ಸಂಚಾಲಕಿಯವರಾದ ಸಿಸ್ಟರ್ ಸೈಮನ್ ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿಯವರಾದ ಸಿಸ್ಟರ್ ಬೆಟ್ಟಿ ಡಿ.ಕೋಸ್ಟರವರ ಸಮುಖದಲ್ಲಿ ಆಚರಿಸಲ್ಪಟ್ಟಿತು.

ತರಗತಿ ಶಿಕ್ಷಕಿ ಶ್ರೀಮತಿ ವಿಶಾಲಾಕ್ಷಿ ಎಂ.ಎಸ್. ರವರ ಮಾರ್ಗದರ್ಶನದಲ್ಲಿ ಮಕ್ಕಳಿಂದ ದೇಶಭಕ್ತಿಗೀತೆ, ನೃತ್ಯ, ರಾಷ್ಟ್ರಾಭಿಮಾನವನ್ನು ಮೂಡಿಸುವ ನಾಟಕ ಹೀಗೆ ವಿವಿಧ ಕಾರ್ಯಕ್ರಮಗಳು ಮೂಡಿಬಂದವು. ಈ ಸಂಧರ್ಭದಲ್ಲಿ ಕಾರ್ಯಕ್ರಮದಲ್ಲಿ ಸಹಶಿಕ್ಷಕ ಶಾಲಾ ವೃಂದದವರು ಹಾಗೂ ಇತರ ತರಗತಿಗಳ ಮಕ್ಕಳು ಪಾಲ್ಗೊಂಡಿದ್ದರು.

ದಿನಾಂಕ 26/01/2019ರ ಮುಂಜಾನೆ 7:30 ಕ್ಕೆ ಶಾಲಾ ಆವರಣದಲ್ಲಿ ಗಣರಾಜ್ಯೋತ್ಸವನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಪುರಸಭಾ ಅದ್ಯಕ್ಷರು ಆಗಮಿಸಿ ದ್ವಜಾರೋಹಣವನ್ನು ನೆರವೇರಿಸಿ ಗಣರಾಜ್ಯೋತ್ಸವ ಮಹತ್ವದ ಬಗ್ಗೆ ಮಾತನಾಡಿದರು. ಶಾಲಾ ಸಂಚಾಲಕಿ ಹಾಗೂ  ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಾಯಿನಿಯವರುಗಳು ಭಾಗವಹಿಸಿದರು. ನಂತರ  ತಾಲ್ಲೂಕಿನ ಪುರಸಭಾ ಬಯಲು ರಂಗ ಮಂದಿರದಲ್ಲಿ ಆಯೋಜಿಸಲಾದ ನೃತ್ಯದಲ್ಲಿ ಸಂತಜೋಸೆಫರ ಪ್ರೌಢಶಾಲೆಯ ವಿದ್ಯಾರ್ಥಿನಿಯವರು ಸಾಮೂಹಿಕ ನೃತ್ಯದಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದರು.
    


 

 

 

 

 

 

 

ಶ್ರೀಮತಿ. ವಿಶಾಲಾಕ್ಷಿ ಎಂ.ಎಸ್, ಶಿಕ್ಷಕರು,
ಸಂತ ಜೋಸೆಫರ ಪ್ರೌಢಶಾಲೆ,
ಕೃಷ್ಣರಾಜನಗರ, ಮೈಸೂರು ಜಿಲ್ಲೆ