Feb 01: ದಿನಾಂಕ 23-01-2019 ರಂದು ಪ್ರಜಂಟೇಶನ್ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆಯ ಸ್ಥಾಪಕರಾದ ಮೊನ್ಸಿಂಜರ್ ರೇಮಂಡ್ ಫ್ರಾನ್ಸಿಸ್ ಕಾಮಿಲ್ಲಸ್ ಮಸ್ಕರೇನ್ಹಸ್‍ರವರ 144ನೇ ಜನ್ಮದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ ಪಶ್ಚಿಮವಲಯದ ಪ್ರಾಂತಾಧಿಕಾರಿನಿ ಸಿಸ್ಟರ್ ಅಸುಂತಾ, ಶಿಕ್ಷಣ ಸಂಯೋಜಕಿ ಸಿಸ್ಟರ್ ಪಿಯರಿನ್, ಶಾಲಾ ಸಂಚಾಲಕಿ ಸಿಸ್ಟರ್ ಸಿಂಪ್ಲಿನಾ, ಮುಖ್ಯೋಪಧ್ಯಾಯಿನಿ ಸಿಸ್ಟರ್ ಜೆಸ್ಸಿ, ಸಿಸ್ಟರ್ ರೋಶಿನಿ ಇವರು ಮಸ್ಕರೇನ್ಹಸ್‍ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ವೇದಿಕೆಯ ಮೇಲೆ ಆಸೀನರಾದಂತಹ ಎಲ್ಲಾ ಅತಿಥಿ ಮಹಾನೀಯರಿಗೆ ಏಳನೇಯ ತರಗತಿಯ ವಿಧ್ಯಾರ್ಥಿ ಕುಮಾರಿ ಮೇಘನಾ ಸ್ವಾಗತವನ್ನು ಕೋರಿದರ್.

ಬಡವರ ಪಾಲಿಗೆ ದೀಪವಾಗಿ, ಹೆಣ್ಣುಮಕ್ಕಳ ಏಳಿಗೆಗಾಗಿ ಶ್ರಮಿಸಿದ ಹಾಗೂ ಜಗತ್ತಿನ ರಕ್ಷಕಿ ಮಾತೆ ಮರಿಯಳ ಜಪಮಾಲೆಯ ಅನುಗ್ರಹದಿಂದ ರೋಗಿಗಳನ್ನು ಗುಣಪಡಿಸಿದ್ದ ಫಾದರ್ ರೇಮಂಡ್ ಮಸ್ಕರೇನ್ಹಸ್‍ರವರ ಬದುಕಿನ ರೂಪಕವನ್ನು ವಿಧ್ಯಾರ್ಥಿನಿಯರು ನಡೆಸಿಕೊಟ್ಟರು. ವಿಡಿಯೋ ದೃಶ್ಯಾವಳಿ ಮೂಲಕ ಫಾದರ್ ರೇಮಂಡ್ ಮಸ್ಕರೇನ್ಹಸ್‍ರವರ ಜೀವನ ಚರಿತ್ರೆಯನ್ನು ಹಾಗೂ ಅವರು ನಡೆದು ಬಂದ ಹಾದಿಯನ್ನು ತೋರಿಸಲಾಯಿತು. ಈ ಸುಸಂದರ್ಭದಲ್ಲಿ ಈ ಸಂಸ್ಥೆಯಲ್ಲಿ ಕಲಿಯುವ ವಿಧ್ಯಾರ್ಥಿಗಳು ತಾವು ಭಾಗ್ಯಶಾಲಿಗಳೆಂದು ನೆನೆಸುತ್ತಾ 7ನೇ ತರಗತಿಯ ವಿಧ್ಯಾರ್ಥಿನಿಯರಾದ ಕುಮಾರಿ ಮಹಿಮಾ ಹಾಗೂ ಕುಮಾರಿ ತನುಶ್ರೀ ತಾವು ಸ್ವ ರಚಿಸಿದ ಕವಿತೆಯನ್ನು ತಮ್ಮ ಸಂಗಡಿಗರೊಂದಿಗೆ ಹಾಡಿದರು. ಅಧ್ಯಕ್ಷತೆ ಸ್ಥಾನ ವಹಿಸಿದ ಸಿಸ್ಟರ್ ಅಸುಂತಾರವರು  ಫಾದರ ಮಸ್ಕರೇನ್ಹಸ್‍ರವರ ಗುಣಗಾನ ಮಾಡಿದರು. ಫಾದರ್ ರೇಮಂಡ್ ಮಸ್ಕರೇನ್ಹಸ್‍ರವರಿಗೆ ಹುಟ್ಟು ಹಬ್ಬದ ಶುಭಾಶಯದ ಹಾಡಿನೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಮಾಡಲಾಯಿತು.


 

 

 

 

 

ಶ್ರೀಮತಿ.ರೀಟಾ ಡಿಸೋಜಾ
ಕನ್ನಡ ಸಹಾಯಕ ಶಿಕ್ಷಕಿ
ಪ್ರಜಂಟೇಶನ್ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆ
ಧಾರವಾಡ