Print

August 03: ದಿನಾಂಕ 22.07.2019ರಿಂದ 24.07.2019ರ ವರೆಗೆ ಬೆಥನಿ ಶಿಕ್ಷಣ ಸಂಸ್ಥೆ ಗುಲಬರ್ಗಾ ವಿಭಾಗದಿಂದ ಅಯೋಜಿಸಲಾಗಿರುವ “ಶಿಕ್ಷಕರಿಗೆ ಆಪ್ತಸಮಾಲೋಚನಾ ಕೌಶಲ್ಯಗಳ ತರಬೇತಿ”ಯಲ್ಲಿ ಬೆಥನಿ ಪ್ರೌಢ, ಶಾಲೆ, ಚಿತ್ತಾಪೂರ ಶಾಲೆಯ ಶಿಕ್ಷಕರಾದ ಶ್ರೀಮತಿ.ಅರ್ಚನಾ ಹಾಗೂ ಶ್ರೀಯುತ ದೇವಪ್ಪರವರು ಈ ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ತರಬೇತಿಯಲ್ಲಿ ಶಿಕ್ಷಕರಿಗೆ ಮಕ್ಕಳ ವಿವಿಧ ರೀತಿಯ ವರ್ತನೆಗಳಿಗೆ ಕಾರಣವಾಗಿರುವ ಅವರ ಆಲೋಚನೆ ಮತ್ತು ಭಾವನೆಗಳ ಬಗ್ಗೆ ತಿಳಿದುಕೊಳ್ಳುವುದನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಮಕ್ಕಳ ಕೆಲವು ಅಸಹಜ ವರ್ತನೆಗಳಿಗೆ ಅವರ ಆಲೋಚನೆ ಮತ್ತು ಭಾವನೆಗಳೇ ಕಾರಣವಾಗಿದ್ದರಿಂದ ಶಿಕ್ಷಕರಾದವರು ಆಪ್ತಸಮಾಲೋಚನೆ ಮಾಡುವುದರ ಮೂಲಕ ಮಕ್ಕಳ ಅಂತಹ ವರ್ತನೆಗಳನ್ನು ಹೋಗಲಾಡಿಸಬಹುದು ಎಂಬುದನ್ನು ಹಂತ ಹಂತವಾಗಿ ತಿಳಿಸಿಕೊಟ್ಟರು.

ಮೊದಲು ಅನೇಕ ಸಂದರ್ಶನಗಳ ಮೂಲಕ ವೈಯಕ್ತಿಕ ಸಮಸ್ಯಗಳನ್ನು ಅನ್ವೇಷಿಸಿ ಪರಿಹಾರ ಗುರುತಿಸುವ ಪ್ರಕ್ರಿಯೆಯನ್ನು ಆಪ್ತಸಮಾಲೋಚನೆ ಎಂದು ಕರೆಯಲಾಗುತ್ತದೆ ಎಂದು ಆರ್ಥದಿಂದ ಪ್ರಾರಂಭಿಸಿ ಆಪ್ತಸಮಾಲೋಚನೆಯಲ್ಲಿನ ಮೂಲಭೂತ ಅಂಶಗಳನ್ನು ಗುಣಗಳನ್ನು ವಿವಿಧ ಹಂತಗಳನ್ನು ವಿವರಿಸುತ್ತ ಕೊನೆಗೆ ಅದರಲ್ಲಿನ ಕೌಶಲ್ಯಗಳನ್ನು ಅರ್ಥಮಾಡಿಸಿದರು. ಜೊತೆಗೆ ಪ್ರತ್ಯಕ್ಷವಾಗಿ ಒಬ್ಬರ ಸಮಸ್ಯೆಯನ್ನು ಮುಂದಿಟ್ಟುಕೊಂಡು ವಾಸ್ತವವಾಗಿ ಆಪ್ತಸಮಾಲೋಚನೆಯನ್ನು ಮಾಡಿ ತೋರಿಸುವುದರ ಮೂಲಕ ತರಬೇತುದಾರರಿಗೆ ಮನನ ಮಾಡಿಸಿದರು.

 

 

 

ಶ್ರೀಯುತ ದೇವಪ್ಪ, ಸಹ ಶಿಕ್ಷಕರು
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ