June 08: ‘ಹಸಿರೇ ಉಸಿರು, ಉಸಿರೇ ಹಸಿರು’ ಎನ್ನುವ ಹಾಗೆ ‘ಉಸಿರಿಗಾಗಿ ಪರಿಸರ ರಕ್ಷಿಸೋಣ’ ಎಂಬ ಘೋಷಣೆಯೊಂದಿಗೆ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳನ್ನು ಎಲ್ಲರಿಗೂ ತಿಳಿಸುತ್ತ ದಿನಾಂಕ. 07.06.2022ರ ಮಂಗಳವಾರದಂದು ಬೆಳಿಗ್ಗೆ ಬೆಥನಿ ಪ್ರೌಢ ಶಾಲೆ ಮತ್ತು ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆ ಒಟ್ಟುಗೂಡಿ ದಿನದ ಸಂಭ್ರಮವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ‘ನಮ್ಮ ಭೂಮಿ ಮಾನವನ ಆಸೆಗಳನ್ನು ಪೂರೈಸಬಲ್ಲುದೇ ವಿನಃ ದುರಾಸೆಗಳನ್ನಲ ಎಂಬುದನ್ನು ನಾಟಕದ ಮೂಲಕ ಮಕ್ಕಳು ವೇದಿಕೆಯ ಮೇಲೆ ಪ್ರದರ್ಶಿಸಿದರು. “ಹಸಿರಿಲ್ಲದೆ ಉಸಿರಿಲ್ಲ” “ಕಾಡಿದ್ದರೆ ನಾಡು” “ಕಾಡು ಬೆಳಸಿ ನಾಡು ಉಳಿಸಿ”. ‘ಪರಿಸರವೇ ಪ್ರಾಣ ಸಕಲರಿಗೂ ಆಶ್ರಯ ತಾಣ’, ಎಂಬ ಹೇಳಿಕೆಗಳನ್ನು ಹೇಳಲಾಯಿತು. ಜೊತೆಗೆ ಮರಗಳ ಬಗ್ಗೆ ಮಕ್ಕಳಿಂದ ಕವನಗಳನ್ನು ಹೇಳಿಸಲಾಯಿತು. ಕೊನೆಗೆ ಮಕ್ಕಳು ತಂದಿರುವ ಗಿಡಗಳನ್ನು ಎಲ್ಲಾ ಶಿಕ್ಷಕರು ಮತ್ತು ಮಕ್ಕಳು ಜೊತೆ ಜೊತೆಯಾಗಿ ನೆಡುತ್ತ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

 

 

 

 

 

 

ಶ್ರೀಮತಿ ಅರ್ಚನಾ, (ಸಹ ಶಿಕ್ಷಕಿ)
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

 

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]