Aug 16: ಇತ್ತೀಚಿನ ದಿನಗಳಲ್ಲಿ ಯುವ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕಳೆಯುತ್ತಿರುವ    ಕಾಲಘಟ್ಟದಲ್ಲಿ, ಇಲ್ಲೊಂದು ವಿದ್ಯಾರ್ಥಿಗಳ ತಂಡ ತಮ್ಮ ಜೇಬಿನ ಒಂದಷ್ಟು ಹಣ ಕೂಡಿಟ್ಟು ಸಮಾಜ ಮುಖಿ ಕಾರ್ಯಕ್ಕೆ ವಿನಿಯೋಗಿಸುವ ಮೂಲಕ ಎಲ್ಲರ ಗಮನ ಸೆಳೆದರು.

ಮುಲ್ಕಿ ಮೆಡಲಿನ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಂಡ ಗುರುಪುರದ ಜೀವದಾನ ಹೆಚ್‍ಐವಿ ಪೀಡಿತರ ಕೇಂದ್ರಕ್ಕೆ ಭೇಟಿ ನೀಡಿ ದಿನ ಉಪಯೋಗಿ ವಸ್ತುಗಳಾದ ಬಟ್ಟೆ, ಸೋಪ್, ಬ್ರಶ್ ಪೇಸ್ಟ್, ತೆಂಗಿನಕಾಯಿ, ಹಣ್ಣು ಹಂಪಲು ಇತ್ಯಾದಿಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದರು.

ಈ ಸಂದರ್ಭದಲ್ಲಿ ಮಾತನಾಡಿದ ಜೀವದಾನ ಕೇಂದ್ರದ ಮುಖ್ಯಸ್ತರಾದ ಭಗಿನಿ ಜಾನ್ಸಿ, ವಿದ್ಯಾರ್ಥಿಗಳು ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜ ಸೇವೆಯಲ್ಲಿ ತಮ್ಮನ್ನು ಅರ್ಪಣಾ ಭಾವದಿಂದ ತೊಡಗಿಸಿಕೊಳ್ಳಬೇಕೆಂದರು.ಕಾಲೇಜಿನ ಪ್ರಾಂಶುಪಾಲರು ಭಗಿನಿ ಜೆಸ್ಸಿ ಕ್ರಾಸ್ತ ಮಾತನಾಡಿ ದು:ಖದಲ್ಲಿದ್ದವರಿಗೆ, ಅಶಕ್ತರಿಗೆ ವಿದ್ಯಾರ್ಥಿಗಳು ತಮ್ಮ ಕೈ ಮೀರಿ ಸೇವೆ ಮಾಡುವ ಮೂಲಕ ಸಮಾಜದ ಕಾರ್ಯವನ್ನು ಮಾಡುವ ಮನೋಭಾವವನ್ನು ಹೊಂದಿರಬೇಕು ಎಂದರು.

ಈ ಸಂದರ್ಭದಲ್ಲಿ ಭಗಿನಿ ಉಷಾ, ಉಪನ್ಯಾಸಕಿ ರೋಶ್ನಿ, ವಿದ್ಯಾರ್ಥಿ ತಂಡ ಮತ್ತಿತರರು ಹಾಜರಿದ್ದರು.

 

Sr Jessy Crasta, Principal
Madeleine PUC, Mulki

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]