Aug 16: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣಕರ್ತರು ಶಿಕ್ಷಕರು - ಪೋಷಕರು. ದಿನಾಂಕ 11.08.2018 ರಂದು ಸಂತಜೋಸೆಫರ ಪ್ರೌಢಶಾಲೆಯಲ್ಲಿ ಶಿಕ್ಷಕ-ಪೋಷಕರ ಸಭೆಯನ್ನು ಆಯೋಜಿಸಲಾಗಿತ್ತು. ನಮ್ಮ ಶಾಲಾ ಮುಖ್ಯೋಪಾಧ್ಯಾಯಿನಿಯವರಾದ ಸಿಸ್ಟರ್ ಬೆಟ್ಟಿ ಡಿ’ಕೋಸ್ಟರವರ ಉಪಸ್ಥಿತಿಯಲ್ಲಿ ಉಪಾಧ್ಯಕ್ಷರು ಮತ್ತು ಸಮಿಯತಿಯ ಸದಸ್ಯರುಗಳನ್ನು ಹಾಗೂ ಪೋಷಕರುಗಳನ್ನು ಶಾಲೆಯ ಸಹ ಶಿಕ್ಷಕರಾದ ಪ್ರಶಾಂತ್‍ರವರು ಕಾರ್ಯಕ್ರಮಕ್ಕೆ ಸ್ವಾಗತವನ್ನು ಕೋರಿದರು. ಮೈಸೂರಿನಿಂದ ಆಗಮಿಸಿದ ಪೂಜ್ಯ ಫಾದರ್ ಜೋಸೆಫ್ ಮೊಂತರೋರವರು (Fr Joseph Montero S.J) ಸಭೆಯನ್ನು ಉದ್ದೇಶಿಸಿ ಹಲವಾರು ಸತ್ಯ ಘಟನೆಗಳ ಉದಾಹರಣೆಗಳನ್ನು ಕೊಡುತ್ತಾ, ಪೋಷಕರಿಗೆ ಮಕ್ಕಳ ಶ್ರೇಯೋಭಿವೃದ್ಧಿಗೆ ಹಾಗೂ ಶಿಸ್ತಿನ ಜೀವನ ಅಳವಡಿಸಿಕೊಂಡು, ಮಕ್ಕಳ ಕಡೆಗೆ ಹೆಚ್ಚಿನ ಗಮನ ಕೊಡಬೇಕೆಂದು ತಿಳಿಸಿದರು. ಹಾಗೆ ಮೊಬೈಲ್ ಬಳಕೆ ಬಗ್ಗೆ ತಿಳಿಸುತ್ತಾ ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಓಳ್ಳೆಯ ವಿದ್ಯಾಭ್ಯಾಸ, ದೇವರ ಬಗ್ಗೆ ಒಲವು ಮೂಡಿಸಿದಲ್ಲಿ ಮಕ್ಕಳಲ್ಲಿ ಪ್ರಶಾಂತತೆ, ಗೌರವ ತನಗೆ ತಾನೇ ಹುಟ್ಟುತ್ತದೆ ಎಂದು ಹೇಳಿ ಮಕ್ಕಳನ್ನು ಸತ್ಪ್ರಜೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪೋಷಕರ ಪಾತ್ರದ ಬಗ್ಗೆ ತಿಳಿಸಿಕೊಟ್ಟರು.  ಮುಖ್ಯೋಪಾಧ್ಯಾಯರಾದ ಸಿಸ್ಟರ್ ಬೆಟ್ಟಿಯವರು ಶಾಲೆಯಲ್ಲಿ ಮಕ್ಕಳಿಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಪೋಷಕರೊಂದಿಗೆ ಹಂಚಿಕೊಂಡರು. ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ರೂಡಿಸಿಕೊಳ್ಳಲು ಪೋಷಕರು ಸಹಕಾರ ನೀಡಬೇಕೆಂದು ತಿಳಿಸಿದರು. ಶಾಲಾ ಶಿಕ್ಷಕಿಯರಾದ ಶ್ರೀಮತಿ ಮಂಜುಳರವರು ರಕ್ಷಕ - ಶಿಕ್ಷಕ ಸಂಘದ ನಿಯಮಾವಳಿಗಳನ್ನು ಓದಿ ಹೇಳಿದರು. ಮುಖ್ಯೋಪಾಧ್ಯಾಯಿನಿಯವರು ಪೋಷಕರಿಗೆ ಮಕ್ಕಳಿಗೆ ಮೊಬೈಲ್ ಹಾಗೂ ದ್ವಿಚಕ್ರವಾಹನಗಳನ್ನು ಕೊಡುವ ಬಗ್ಗೆ ಎಚ್ಚರಿಕೆ ನೀಡಿ ಸಂಘದ ಅಭಿವೃದ್ಧಿಗೆ ತಮ್ಮ ಸಹಕಾರ ತುಂಬ ಮುಖ್ಯವೆಂದು ತಿಳಿಸಿದರು.

ಉಪಾಧ್ಯಾಕ್ಷರಾದ ಶ್ರೀಮತಿ ಸಬೀನ, ಪೊಷಕರು ಶಾಲಾ ಸಂಘದ ಬಗ್ಗೆ ಶಾಲಾ ಮಕ್ಕಳ ಅಭಿವೃದ್ಧಿ ಹಾಗೂ ಶಿಕ್ಷಕರ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಎಲ್ಲಾ ಪೋಷಕರ ಪರವಾಗಿ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯ ನಂತರ ಸಂತ ಜೋಸೆಫರ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರುಗಳಿಗೆ ಪುನಶ್ಚೇತನ ಶಿಬಿರವನ್ನು ಆಯೋಜಿಸಲಾಗಿತ್ತು. ಎಲ್ಲಾ ಶಿಕ್ಷಕರು ಪಾಲ್ಗೊಂಡಿದ್ದರು.

 

 

 

 

ಅಂತಿಮದಲ್ಲಿ ಶಾಲಾ ಸಹ ಶಿಕ್ಷಕರಾದ ಶ್ರೀಮತಿ ವೀಣಾರವರು ವಂದನಾರ್ಪಣೆಯನ್ನು ಅರ್ಪಿಸಿದರು.

ಮಂಜುಳ, ಸಹ ಶಿಕ್ಷಕಿ
ಸಂತ ಜೋಸೆಫರ ಪ್ರೌಢಶಾಲೆ, ಕೃಷ್ಣರಾಜನಗರ

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]