ಸೈಂಟ್ ಸೆಬಾಸ್ಟಿನ್ ಅನುದಾನಿತ ಹಿರಿಯ ಪ್ರ್ರಾಥಮಿಕ ಶಾಲೆ, ಬೆಂದೂರು ಇಲ್ಲಿಯ ಮುಖ್ಯೋಪಾಥ್ಯಾಯಿನಿ ಸಿಸ್ಟರ್ ಮರ್ಸಿನ್ ಬಿ.ಎಸ್.ರವರು ದಿನಾಂಕ 31.01.2019ರಂದು ತಮ್ಮ 39 ವರ್ಷಗಳ ಸುಧೀರ್ಘ ಸೇವೆಯಿಂದ ನಿವೃತ್ತಿ ಹೊಂದಿದರು.

ಸಿಸ್ಟರ್ ಮರ್ಸಿನ್‍ರವರು ತಮ್ಮ ಸೇವಾವಧಿಯಲ್ಲಿ ಸಾವಿರಾರು ಬಡಮಕ್ಕಳಿಗೆ ಪ್ರೀತಿ ಮಮತೆಯನ್ನು ಧಾರೆಯೆರೆದು, ನಿಸ್ವಾರ್ಥ ಮನೋಭಾವನೆಯ ಮೂಲಕ ವಿದ್ಯಾರ್ಜನೆಯನ್ನು ನೀಡಿರುವರು. ಉತ್ತಮ ಆಡಳಿತವನ್ನು ನಡೆಸಿ, ಶಾಲೆಯನ್ನು ಪ್ರಗತಿ ಪಥದತ್ತ ಮುನ್ನೆಡೆಸಿದ ಕೀರ್ತಿಗೆ ಪಾತ್ರರಾಗಿರುವರು.

ಬೆಥನಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹಾಗೂ ನಮ್ಮ ಶಾಲಾ ಸಂಚಾಲಕಿಯಾಗಿರುವ ಸಿಸ್ಟರ್ ಮಾರಿಯೇಟ್ ಬಿ.ಎಸ್‍ರವರು ವಿದಾಯ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಸಿಸ್ಟರ್ ಮರ್ಸಿನ್‍ರವರಿಗೆ ಶಾಲು ಹೊದಿಸಿ, ಹಾರ ಹಾಕಿ, ಫಲಪುಷ್ಪ, ಸನ್ಮಾನ ಪತ್ರ ನೀಡಿ, ಗೌರವಿಸಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಬೆಥನಿ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಲೀನಾ ಪಿರೇರಾ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ರಮೇಶ್ ಶೆಟ್ಟಿ, ಪದಾಧಿಕಾರಿಗಳು, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು ಡಾ. ಇ.ವಿ.ಎಸ್. ಮಾಬೆನ್ ಹಾಗೂ ಸದಸ್ಯರು, ಶಿಕ್ಷಕ ವೃಂದ, ವಿದ್ಯಾರ್ಥಿ ಬಳಗ ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

 

 

 

 

 

Mrs Lona B D’Souza, Asst Teacher
St Sebastian’s Hr Pry School, Bendur