ಸೆಕ್ರೆಡ್ ಹಾರ್ಟ್ ಹಿರಿಯ ಪ್ರಾಥಮಿಕ ಶಾಲೆ ಸಂತಿಬಸ್ತವಾಡದಲ್ಲಿ ಸೇವೆ ಸಲ್ಲಿಸಿದ ಶ್ರೀಮತಿ ಸೋಫಿ ಡಿ’ಸಿಲ್ವಾ ಸಹಶಿಕ್ಷಕಿ ಹಾಗೂ ಪ್ರಭಾರಿ ಮುಖ್ಯ ಶಿಕ್ಷಕಿ ಇವರು ದಿನಾಂಕ 31-05-2023 ರಂದು ತಮ್ಮ 40 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾದರು.

ವಿದಾಯ ಕಾರ್ಯಕ್ರಮವು ದಿನಾಂಕ 24-06-2023 ರಂದು ಸೆಕ್ರೆಡ್ ಹಾರ್ಟ್ ಶಾಲೆಯ ಸಭಾಂಗಣದಲ್ಲಿ ನೆರವೇರಿತು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಧಾರವಾಡ ಪಶ್ಚಿಮ ಪ್ರಾಂತ್ಯದ ಪ್ರಾಂತ್ಯಾಧಿಕಾರಿಣಿಯರಾದ ವಂ.ಭ.ಸ್ಯಾಲಿರವರು, ಮುಖ್ಯ ಅತಿಥಿಗಳಾಗಿ ಬೆಥನಿ ವಿದ್ಯಾಸಂಸ್ಥೆಯ ಪಶ್ಚಿಮ ಪ್ರಾಂತ್ಯ ಧಾರವಾಡದ ಶಿಕ್ಷಣ ಸಂಯೋಜಕಿ ವಂ.ಭ.ಪಿಯೆರಿನ್‍ರವರು ಅತಿಥಿಗಳಾಗಿ ವಂ ಭಗಿನಿ ರೋಜಾನ್, ಮಾಜಿ ಪ್ರಾಂತ್ಯಾಧಿಕಾರಿಣಿಯವರು, ಗ್ರಾತ್ಸಿಯಾ ಪ್ಲೇನಾ ಕಾನ್ವೆಂಟಿನ ಸುಪಿರಿಯರ್ ತೇರೆಜಿಯಮ್ಮ, ಹಾಗೂ ವಂ.ಭ.ಅರುಣರವರು, ಶಾಲಾ ಸಂಚಾಲಕಿಯವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಹಾಗೂ ಎಲ್ಲಾ ಶಿಕ್ಷಕ ವೃಂದವು ಸೇರಿ ಅರ್ಥಭರಿತ ಕಾರ್ಯಕ್ರಮವನ್ನು ನಡೆಸಿ ನಿವೃತ್ತಿ ಶಿಕ್ಷಕಿಗೆ ಅಭಿನಂದನೆ ಸಲ್ಲಿಸಿ ಸನ್ಮಾನಿಸಿ ಅವರ ನಿವೃತ್ತ ಜೀವನಕ್ಕೆ ಶುಭ ಕೋರಿದರು.

 

 

ಶ್ರೀಮತಿ ರೆಮೆಡಿಯಾ ವಾಜ್, ಪ್ರಭಾರಿ ಮುಖ್ಯೋಪಾಧ್ಯಾಯಿನಿ
ಸೆಕ್ರೆಡ್ ಹಾರ್ಟ್ ಹಿ. ಪ್ರಾ.ಶಾಲೆ, ಸಂತಿಬಸ್ತವಾಡ, ಬೆಳಗಾವಿ

 

 

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]