ದಿನಾಂಕ 17.02.2018 ರ ಶನಿವಾರದಂದು ಬೆಥನಿ ವಿದ್ಯಾಸಂಸ್ಥೆಗೆ ಒಳಪಟ್ಟ ಸೇಕ್ರೆಡ್ ಹಾಟ್ರ್ಸ್ ಪ್ರೌಢಶಾಲಾ ಸಭಾಂಗಣದಲ್ಲಿ ನಮ್ಮ ಶಾಲೆಯಲ್ಲಿ 38 ವರ್ಷಗಳ ಕಾಲ ಜವಾನಿಯಾಗಿ ಸೇವೆ ಸಲ್ಲಿಸಿದ ಶ್ರೀಮತಿ ರೋಸಾ ಜೆ. ಫೆರ್ನಾಂಡಿಸ್ ಹಾಗೂ 37 ವರ್ಷಗಳ ಕಾಲ ಗ್ರಂಥ ಪಾಲಕಿ/ಗುಮಾಸ್ತೆಯಾಗಿ ಸೇವೆ ಸಲ್ಲಿಸಿದ ಶ್ರೀಮತಿ ಗೀತಾ ಕುಮಾರಿ ಇವರಿಗೆ ವಿದಾಯ ಕೂಟವು ನೆರವೇರಿತು.

ಈ ವಿದಾಯ ಕೂಟದ ಅಧ್ಯಕ್ಷತೆಯನ್ನು ಪ್ರಾಂತ್ಯಾಧಿಕಾರಿಣಿ ಹಾಗೂ ಮಂಗಳೂರು ಪ್ರಾಂತ್ಯದ ಬೆಥನಿ ವಿದ್ಯಾ ಸಂಸ್ಥೆಯ ಕಾರ್ಪೋರೇಟ್ ಮ್ಯಾನೇಜರ್ ಆಗಿರುವ ವಂ! ಭ! ಸಿಸಿಲಿಯಾ ಮೆಂಡೋನ್ಸಾ ರವರು ವಹಿಸಿ, ನಿವೃತ್ತರಿಗೆ ಶಾಲು ಹೊದಿಸಿ, ಫಲಪುಪ್ಷ ಹಾಗೂ ಕಿರು ಕಾಣಿಕೆಯನ್ನು ನೀಡಿ ಸನ್ಮಾನಿಸಿ ಶುಭವನ್ನು ಕೋರಿದರು. ಅವರು ನೀಡಿದ ನಿಸ್ವಾರ್ಥ ಸೇವೆಗಾಗಿ ದೇವರು ಅವರನ್ನು ನಿರಂತರವಾಗಿ ಆಶೀರ್ವದಿಸಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಯುತ ಜಾರ್ಜ್ ಡಿ ಸೋಜ, ಶಾಲಾ ಮುಖ್ಯೋಪಾಧ್ಯಾನಿಯವರಾದ ವಂ! ಭ! ಸಿಂತಿಯ ಡಿ ಕುನ್ಹಾ, ಶಿಕ್ಷಕ - ಶಿಕ್ಷಕೇತರ ಸಿಬ್ಬಂದಿ ವರ್ಗ, ನಿವೃತ್ತರ ಹಿತೈಷಿಗಳು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಆಗಮಿಸಿದ ಸರ್ವರನ್ನು ಶಾಲಾ ಮುಖ್ಯೋಪಾಧ್ಯಾಯಿನಿಯವರಾದ ವಂ! ಭ! ಸಿಂತಿಯಾ ಡಿ ಕುನ್ಹಾ ರವರು ಸ್ವಾಗತಿಸಿ, ಶಿಕ್ಷಕಿಯಾದ ಶ್ರೀಮತಿ ಗ್ರೇಸಿ ಪಿಂಟೋ ವಂದಿಸಿದರು. ಕಾರ್ಯಕ್ರಮವನ್ನು ಶಿಕ್ಷಕರಾದ ಶ್ರೀಯುತ ಬರ್ನಾಡ್ ಡಿ ಸೋಜರವರು ನಿರೂಪಿಸಿದರು.

 


 
Sr Cynthia D’Cunha BS, Headmistress
Sacred Heart’s HS, Kulshekar

 

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]