Oct 3: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆ, ಕಂಕನಾಡಿ ಇವರ ಜಂಟಿ ಆಶ್ರಯದಲ್ಲಿ ಮಂಗಳೂರು ‘ಬಿ’ ವಲಯದ ಹೋಬಳಿ ಮಟ್ಟದ ಕ್ರೀಡಾಕೂಟವು ದಿ: 29/09/2018 ರಂದು ಮಂಗಳ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾ ಕೂಟವು ಪ್ರಾಥ9ನೆಯೊಂದಿಗೆ ಆರಂಭಿಸಲಾಯಿತು. ಅಧ್ಯಕ್ಷರಾಗಿ ಸೈಂಟ್ ಜೋಸೆಫ್ಸ್ ಶಾಲಾ ಸಂಚಾಲಕಿಯಾದ ಭಗಿನಿ ಲೀನಾ ಪಿರೇರ, ಮುಖ್ಯ ಅಥಿತಿಗಳಾಗಿ ಸೈಂಟ್ ಎಲೋಶಿಯಸ್ ಕಾಲೇಗಿನ ಬೋರ್ಡ್ ಆಫ್ ಸ್ಟಡೀಸ್ ಪಿ.ಜಿ.ಡಿ.ಎಮ್ ನಲ್ಲಿ ಡೀನ್ ಹಾಗೂ ಪ್ರೊಫೆಸರ್ ಎಡ್ಮಂಡ್ ಪ್ರ್ಯಾಂಕ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀಯುತ ವಿಷ್ಣು ನಾರಾಯಣ ಹೆಬ್ಬರ್, ಮಂಗಳೂರು ಹೋಬಳಿ ಅಧಿಕಾರಿ ಶ್ರೀಮತಿ ರೇಣು ಕುಮಾರಿ, ಬಜಾಲ್ ನಂತೂರು ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶ್ರೀಮತಿ ಗೀತಾ, ಶಾಲಾ ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷ ಶ್ರೀ ರವಿರಾಜ್ ಕುಲಾಲ್, ಸೈಂಟ್ ಜೋಸೆಫ್ಸ್ ಶಾಲೆಯ ಮುಖ್ಯ ಶಿಕ್ಷಕಿ ಭಗಿನಿ ವೀಣಾ ಕೆ ಅರಾನ್ಹಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮಖ್ಯ ಶಿಕ್ಷಕಿ ಸರ್ವರನ್ನು ಸ್ವಾಗತಿಸಿದರು. ದೈಹಿಕ ಶಿಕ್ಷಕ ಶ್ರೀ ವಿನ್ಸಂಟ್  ಕಾರ್ಯಕ್ರಮವನ್ನು ನಿರೂಪಿಸಿದರು.
ಸಂಚಾಲಕಿ ಭಗಿನಿ ಲೀನಾ ಪಿರೇರರವರು ಅಧ್ಯಕ್ಷತೆ ವಹಿಸಿ ಶಾಲಾ ಧ್ವಜವನ್ನು ಹಾರಿಸಿ ಕ್ರೀಡಾಜ್ಯೋತಿಯನ್ನು ಬೆಳಗಿಸುವ ಮೂಲಕ ಕ್ರೀಡಾ ಕೂಟಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀ ವಿಷ್ಣು ನಾರಾಯಣ ಹೆಬ್ಬರ್, ಇವರು ಕ್ರೀಡಾ ಧ್ವಜ ಹಾರಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಮುಖ್ಯ ಅತಿಥಿ ಸಂತ ಎಲೋಶಿಯಸ್ ಕಾಲೇಜಿನ ಫ್ರೋಫಸರ್ ಎಡ್ಮಂಡ್ ಪ್ರಾಂಕ್ ಇವರು ದೀಪ ಬೆಳಗಿಸಿ ಕ್ರಿಡೆಯನ್ನು ಉದ್ಘಾಟಿಸಿ ಕ್ರೀಡಾ ಪಟುಗಳನ್ನು ಹುರಿದುಂಬಿಸಿದರು.

ಸಹಶಿಕ್ಷಕಿ ದೊರೊತಿ ಫ್ಲೋರಸ್ ಬಂದ ಎಲ್ಲಾ ಅಥಿತಿಗಳಿಗೆ ಹಾಗೂ ಸಹಕರಿಸಿದ ಎಲ್ಲಾರಿಗೂ ಅಭಿನಂದನೆಗಳನ್ನು ಸಲ್ಲಿಸಿದರು. ನಂತರ ಕ್ರೀಡೆಗಳು ಅಪರಾಹ್ನ 2 ಗಂಟೆಯತನಕ ಜರುಗಿದವು. ಸಮಾರೋಪ ಸಮಾರಂಭದ ವೇಳೆ ವಿಜೇತರಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.

ಸಿಸ್ಟರ್ ವೀಣಾ ಅರಾನ್ಹಾ ಬಿ ಎಸ್
ಮುಖ್ಯ ಶಿಕ್ಷಕಿ, ಸೈಂಟ್ ಜೋಸೆಫ್ಸ್ ಹಿ.ಪ್ರಾ. ಶಾಲೆ
ಕಂಕನಾಡಿ, ಮಂಗಳೂರು