Nov 26: ದಿ. 22.11.2018 ರಂದು ಬೆಥನಿ ಪ್ರೌಢ ಶಾಲೆ ಚಿತ್ತಾಪುರದಲ್ಲಿ ವಿಶ್ವ ಜನ ಸೇವಾ ಸಂಸ್ಥೆ ಹಾಗೂ ನಾಗಾವಿ ಸಾಂಸ್ಕøತಿಕ ಪ್ರತಿಷ್ಠಾನ ಚಿತ್ತಾಪುರ ಇವರ ಸಂಯುಕ್ತಾಶ್ರಯದಲ್ಲಿ ಸನ್ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಶ್ರೀ ಪ್ರಿಯಾಂಕ ಖರ್ಗೆ ಅವರ 40 ನೇ ಜನ್ಮ ದಿನ ಪ್ರಯುಕ್ತ ಸಾಹಿತ್ಯ ಸಿಂಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ವಿಜಯಕುಮಾರ ಸಾತನೂರಕರ ಉದ್ದಿಮೆದಾರರು ಕಲಬುರಗಿ ಆಗಮಿಸಿದರು. ಮುಖ್ಯ ಅತಿಥಿಗಳಾಗಿ ನಟರಾಜ ಗೌಡ ಬಿ.ಆರ್.ಸಿ. ಉಪಸ್ಥಿತರಿದ್ದರು. ಕಾರ್ಯಕ್ರಮದ ಉಪನ್ಯಾಸಕರಾಗಿ ಶ್ರೀ ಸಿದ್ದಲಿಂಗ ಬಾಳಿ ಕ.ಸಾ.ಪ. ಗೌರವ ಕಾರ್ಯದಶಿಅಗಳು, ಚಿತ್ತಾಪುರ ಅವರು"ಚಿತ್ತಾಪುರ ಸಾಹಿತ್ಯ ಮತ್ತು ಸಾಂಸ್ಕøತಿಕ' ಕ್ಷೇತ್ರಕ್ಕೆ ಪ್ರಿಯಾಂಕ ಖರ್ಗೆ ರವರ ಕೊಡುಗೆ” ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ಪ್ರಿಯಾಂಕ ಖರ್ಗೆರವರು ಶಾಸಕರಾದ ಮೇಲೆ ಕ್ಷೇತ್ರದಲ್ಲಿ ಕಲೆ, ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ಮೂರು ಬಾರಿ ತಾಲೂಕಾ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲು ಸಾಕಷ್ಟು ಅನುದಾನ ನೀಡಿ ಸಹಕರಿಸಿದ್ದಾರೆ ಎಂದು ತಿಳಿಸಿದರು. ಇನ್ನೋರ್ವ ಉಪನ್ಯಾಸಕರಾದ ಶ್ರೀ ಎಚ್.ಬಿ.ತೀರ್ಥೆ ಮಕ್ಕಳ ಸಾಹಿತಿಗಳು “ ಮಕ್ಕಳ ಮನೋವಿಕಾಸಕ್ಕೆ ಸಾಹಿತ್ಯ ಪೂರಕ” ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು. ಸಾಹಿತ್ಯವು ಮನುಷ್ಯನಲ್ಲಿರುವ ಕ್ರೂರ ಗುಣಗಳನ್ನು ಹೊಡೆದೋಡಿಸಿ ಮಾನವನನ್ನಾಗಿ ಮಾಡುತ್ತದೆ, ಅಲ್ಲದೆ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು, ಜ್ಞಾನಾರ್ಜನೆಯನ್ನು ಮೂಡಿಸಲು ಸಾಹಿತ್ಯ ಅವಶ್ಯಕವಾಗಿದೆ ಎಂದು ಹಲವಾರು ಕಥೆ ಮತ್ತು ದೃಷ್ಟಾಂತಗಳ ಮೂಲಕ ಮಕ್ಕಳಿಗೆ ಸಾಹಿತ್ಯದ ಮಹತ್ವವನ್ನು ಸರಳವಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಥನಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯನಿ ಸಿ. ಕವಿತಾ ವಹಿಸಿದ್ದರು. ಕಾರ್ಯಕ್ರಮದ ರೂವಾರಿಗಳಾದ ಶ್ರೀ ನಾಗಯ್ಯ ಸ್ವಾಮಿ ಅಲ್ಲೂರ ವಿಶ್ವ ಜನ ಸೇವಾ ಸಂಸ್ಥೆಯ ಅಧ್ಯಕ್ಷರು, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕರಾದ ಶ್ರೀ ವಿಶ್ವನಾಥ ಕುಂಬಾರ ಎಲ್ಲರನ್ನು ಸ್ವಾಗತಿಸಿದರು. ಶ್ರೀ ಬಸವರಾಜ ಪೂಜಾರಿ ವಂದಿಸಿದರು. ಶ್ರೀ ನರಸಪ್ಪ ಚಿನ್ನ ಕಟ್ಟಿ ಕಾರ್ಯಕ್ರಮ  ನಿರೂಪಿಸಿದರು. ಊರ ಸಾಹಿತ್ಯ ಅಭಿಮಾನಿಗಳು ಶಾಲೆಯ ಎಲ್ಲ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಪೂರ್ವವಾದ ಅನುಭವ ಪಡೆದರು.

 

 

 

 

 

 

 

 

ಮುಖ್ಯೋಪಾಧ್ಯಾಯಿನಿ ಹಾಗೂ ಸಿಬ್ಬಂದಿ ವರ್ಗ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]