July 22: ಯುವಶಕ್ತಿ ರಾಷ್ಟ್ರದ ಶಕ್ತಿ. ನವಭಾರತ ನಿರ್ಮಾಣದ ರೂವಾರಿಗಳು. 2019-2020ನೇ ಶೈಕ್ಷಣಿಕ ವರ್ಷದ ಎನ್ನೆಸ್ಸೆಸ್ ಘಟಕದ ಉದ್ಘಾಟನಾ ಕಾರ್ಯಕ್ರಮ ಇಲ್ಲಿನ ರೋಸಾ ಮಿಸ್ತಿಕಾ ಪ.ಪೂ ಕಾಲೇಜು ಕಿನ್ನಿಕಂಬಳದಲ್ಲಿ ನಡೆಯಿತು.
   
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ನಿವೃತ್ತ ಸಂಚಾಲಕರಾದ ಭ. ಕನ್ಸೆಟ್ಟಾರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪತ್ರಕರ್ತರಾದ ಶ್ರೀ ಕೀರ್ತಿರಾಜ್ ಕರಂದಾಡಿ ಇವರು ಮಾತನಾಡಿ, ಯುವಕರು ರಾಷ್ಟ್ರದ ಅಭ್ಯುದಯಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕು. ಎನ್‍ಎಸ್‍ಎಸ್‍ನ ಮೂಲಕ ವ್ಯಕ್ತಿತ್ವ ವಿಕಸನದ ಜೊತೆಗೆ ಉತ್ತಮ ನಾಯಕತ್ವವನ್ನು ಮೈಗೂಡಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು. ಪ್ರಾಂಶುಪಾಲೆ ಭಗಿನಿ ಅನಿತಾ ಲೀಡಿಯಾ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಅಮ್ಸೀಲ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ನಾಯಕ ಆಕಾಶ್ ವಂದಿಸಿದರು. ಕಾರ್ಯಕ್ರಮಾಧಿಕಾರಿ ಶ್ರೀ  ಅವಿಲ್ ರೆನಿಲ್ ಡಿಸಿಲ್ವ ಮತ್ತು ಇತರ ಉಪನ್ಯಾಸಕರು ಉಪಸ್ಥಿತರಿದ್ದರು.


 

ಭಗಿನಿ ಅನಿತಾ ಲೀಡಿಯಾ, ಪ್ರಾಂಶುಪಾಲೆ
ರೋಸಾ ಮಿಸ್ತಿಕಾ ಪ.ಪೂ ಕಾಲೇಜು, ಕಿನ್ನಿಕಂಬಳ

Comments powered by CComment

Home | News | Sitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]