Print

Sep 28: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ತಾಲೂಕ ಚಿತ್ತಾಪೂರ ಘಟಕದ ಉದ್ಘಾಟನಾ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಸನ್ಮಾನ ಸಮಾರಂಭವನ್ನು ಬೆಥನಿ ಪ್ರೌಢ ಶಾಲೆಯಲ್ಲಿ ದಿನಾಂಕ 20 ಸೆಪ್ಟೆಂಬರ್ 2019ರಂದು ನಡೆಯಿತು. ಕಾರ್ಯಕ್ರಮವನ್ನು ಶ್ರೀಮತಿ ಸಂಗಮ್ಮ ದರಪೂರ ಜಾನಪದ ಮಕ್ಕಳ ಕಥೆಗಾರ್ತಿ ಇವರು ಕಥೆಯನ್ನು ಹೇಳುವುದರ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಜಗದೇವರೆಡ್ಡಿ ಪೋಲಿಸ್ ಪಾಟೀಲ ತಾಲೂಕ ಪಂಚಾಯತ ಅಧ್ಯಕ್ಷರು, ಶ್ರೀಮತಿ ಶಂಕ್ರಮ್ಮ ಧವಳಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಚಿತ್ತಾಪೂರ, ಶ್ರೀ ಮನೋಜಕುಮಾರ ಗುರಿಕಾರ ಮುಖ್ಯ ಅಧಿಕಾರಿಗಳು ಪುರಸಭೆ ಚಿತ್ತಾಪೂರ, ಸಿ.ಕವಿತಾ ಬಿ ಎಸ್ ಮುಖ್ಯೋಪಾಧ್ಯಾಯಿನಿ ಬೆಥನಿ ಪ್ರೌಢ ಶಾಲೆ ಚಿತ್ತಾಪೂರ, ಸಿ.ಲೂಸಿ ಕ್ಲೇರ್ ಮುಖ್ಯಗುರುಗಳು ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆ, ಚಿತ್ತಾಪೂರ ಭಾಗವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ಶ್ರೀ ಮಹಿಪಾಲರೆಡ್ಡಿ ಮುನ್ನೂರ ಜಿಲ್ಲಾಧ್ಯಕ್ಷರು ಮಕ್ಕಳ ಸಾಹಿತ್ಯ ಪರಿಷತ್ತ ಕಲಬುರಗಿ ಭಾಗವಹಿಸಿದ್ದರು. ಇವರು ಕಾರ್ಯಕ್ರಮವನ್ನು ಕುರಿತು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಾಹಿತ್ಯದ ಅವಶ್ಯಕತೆ ಇದೆ. ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವುದರ ಕಡೆ ಆಸಕ್ತಿಯನ್ನು ಬೆಳಸಿಕೊಳ್ಳಬೇಕು. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಆಸಕ್ತಿನ್ನು ಮೂಡಿಸಬೇಕು ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತನಾಡಿ ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿಯನ್ನು ಬೆಳೆಸಲು ಇಲಾಖೆಯ ಕಡೆಯಿಂದ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನರಸಪ್ಪ ಚಿನ್ನಕಟ್ಟಿ ಅಧ್ಯಕ್ಷರು ತಾಲೂಕ ಮಕ್ಕಳ ಸಾಹಿತ್ಯ ಪರಿಷತ್ತ ಚಿತ್ತಾಪೂರ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಮುಖ್ಯ ಗುರುಗಳು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಾಹಿತ್ಯ ಪರಿಷತ್ತ ವತಿಯಿಂದ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತ ಮಕ್ಕಳಿಗೆ ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.


                                           

 

ಶ್ರೀಯುತ ಬಸವರಾಜ ಪೂಜಾರಿ, ಸಹ ಶಿಕ್ಷಕರು
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ