Nov 25: ದಿನಾಂಕ 14.11.2019 ರಂದು ಬೆಥನಿ ಪ್ರೌಢ ಶಾಲೆ, ಚಿತ್ತಾಪೂರದಲ್ಲಿ ಪಂಡಿತ ಜವಾಹರಲಾಲ ನೆಹರೂ ಅವರ ಹುಟ್ಟು ಹಬ್ಬವನ್ನು ಮಕ್ಕಳ ದಿನಾಚರಣೆಯಾಗಿ ಬಹಳ ಅದ್ದೂರಿಯಾಗಿ ಆಚರಿಸಲಾಯಿತು. ಮುಖ್ಯೋಪಾಧ್ಯಾಯರು ಹಾಗೂ ಎಲ್ಲಾ ಶಿಕ್ಷಕ ವರ್ಗದವರು ಸೇರಿ ಎಲ್ಲಾ ಮಕ್ಕಳಿಗೆ ಆಮಂತ್ರಣವನ್ನು ನೀಡಿದರು. ನಂತರ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಲೆಯ ಮುಖ್ಯಮಂತ್ರಿ ಕು.ನಿಖಿಲ ಹಾಗೂ ಉಪಮುಖ್ಯಮಂತ್ರಿ ಕು.ವಿಜಯಲಕ್ಷ್ಮೀಯವರು ವೇದಿಕೆಯನ್ನು ಅಲಂಕರಿಸಿದರು. ಶಾಲೆಯ ಮುಖ್ಯಗುರುಗಳು ಹಾಗೂ ವಿದ್ಯಾರ್ಥಿಗಳು ಪಂಡಿತ ಜವಾಹರಲಾಲ ನೆಹರೂ ಅವರ ಭಾವಚಿತ್ರಕ್ಕೆ ಮಾಲರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಲ್ಲಾ ಶಿಕ್ಷಕರು ಮಕ್ಕಳಿಗೆ ಸಂತೋಷಪಡಿಸಲು ನೃತ್ಯ ಹಾಗೂ ಸಂಗೀತದ ಮೂಲಕ ಮಕ್ಕಳನ್ನು ಮನರಂಜಿಸಿದರು. ಮಕ್ಕಳಿಗಾಗಿ ಏರ್ಪಡಿಸಿದ್ದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಸಿ.ಕವಿತಾ ಮುಖ್ಯೋಪಾಧ್ಯಾಯರು ಮಕ್ಕಳ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಶ್ರೀಯುತ ದೇವಪ್ಪ ಸರ್ ಅವರು ಸ್ವಾಗತಿಸಿದರು, ಶ್ರೀಯುತ ವಿಶ್ವನಾಥ ಕುಂಬಾರವರು ಅವರು ನಿರೂಪಿಸಿದರು. ಶ್ರೀಯುತ ಮಹೇಶ ಸರ್ ಅವರು ವಂದಿಸಿದರು.

ಶ್ರೀಮತಿ ಸುಷ್ಮಾ ಸಹ ಶಿಕ್ಷಕರು
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

 

 

 

 

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]