Nov 30: ದಿನಾಂಕ 26.11.2019ರಂದು ನಮ್ಮ ಶಾಲೆಯಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಕವಿತಾ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರವರ ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಮಾಡುವುದರ ಮೂಲಕ ಆರಂಭಿಸಲಾಯಿತು. ಕುಮಾರಿ ವಿಜಯಲಕ್ಷ್ಮೀ ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಕೇಳುವಂತೆ ಓದಿದಳು. ನಂತರ ಪ್ರಸ್ತಾವನೆಯಲ್ಲಿರುವ ಮುಖ್ಯ ಅಂಶಗಳಾದ ಸ್ವಾತಂತ್ರ್ಯ, ನ್ಯಾಯ, ಸಮಾನತೆ, ಮುಕ್ತತೆ ಹಾಗೂ ಭಾತೃತ್ವ ಪ್ಲೇಕಾರ್ಡಗಳನ್ನು ವಿದ್ಯಾರ್ಥಿಗಳು ಎಲ್ಲರಿಗೂ ನೋಡುವಂತೆ ಪ್ರದರ್ಶಿಸಿ ಅವುಗಳ ಬಗ್ಗೆ ವಿವರಣೆ ನೀಡಿದರು. ಕುಮಾರಿ ಪವಿತ್ರಾ ಸಂವಿಧಾನದ ಪ್ರಮುಖ ಲಕ್ಷಣಗಳನ್ನು ತಿಳಿಸಿದಳು. ನಂತರ ಸಂವಿಧಾನದ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಲಾಯಿತು. ನಂತರ ಭಾರತ ಸಂವಿಧಾನದ ರಚನೆ, ಮಹತ್ವದ ಬಗ್ಗೆ ಶ್ರೀಯುತ ಬಸವರಾಜ ಪೂಜಾರಿ ಸರ್ ಅವರು ಮಾತನಾಡಿದರು. ಕಾರ್ಯಕ್ರಮವನ್ನು ಶ್ರೀಯುತ ವಿಶ್ವನಾಥ ಸರ್ ಅವರು ನಿರೂಪಿಸಿದರು.

ಈ ಕಾರ್ಯಕ್ರಮದ ಅಂಗವಾಗಿ ಪ್ರಬಂಧ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆಯನ್ನು ನಡೆಸಲಾಯಿತು.

 

 

ಸಿ.ಕವಿತಾ ಬಿ.ಎಸ್. ಮುಖ್ಯೋಪಾಧ್ಯಾಯಿನಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]