Dec 14: ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನ ಮತ್ತು ಕೌಶಲ್ಯ, ಲಾಭ-ನಷ್ಟ, ಗಣಿತದ ಲೆಕ್ಕಾಚಾರ, ಹಣದ ಮೌಲ್ಯದ ಬಗ್ಗೆ ಅರಿವು ಮೂಡಿಸಲು ಹಾಗೂ ಕೊಡುವ ಮತ್ತು ತೆಗೆದುಕೊಳ್ಳುವ, ಪದಾರ್ಥಗಳ ಗುಣಮಟ್ಟ ಬಗ್ಗೆ ತಿಳಿದುಕೊಂಡು ವ್ಯಾಪಾರ ಮಾಡುವ, ಅಷ್ಟೇ ಅಲ್ಲದೇ ಗ್ರಾಹಕರನ್ನು ತಮ್ಮೆಡೆಗೆ ಆಕರ್ಷಿಸುವ ಕೌಶಲ್ಯಗಳ ಅರಿವು ಮೂಡಿಸಲು, ಇದರೊಂದಿಗೆ ಪ್ರಾಮಾಣಿಕತೆ ಮೌಲ್ಯವನ್ನು ರೂಡಿಸಿಕೊಳ್ಳಲು ಸಂತ ಜೋಸೆಫರ ಕನ್ನಡ ಮಾಧ್ಯಮ ಶಾಲೆ ಕೆ.ಆರ್.ನಗರದಲ್ಲಿ ಮಕ್ಕಳ ಮೆಟ್ರಿಕ್ ಮೇಳವನ್ನು ಏರ್ಪಡಿಸಲಾಯಿತು. ಈ ಕಾರ್ಯಕ್ರಮವನ್ನು ನಮ್ಮ ಶಾಲೆಯ ಸಂಚಾಲಕಿ, ಮೂರು ಶಾಲೆಗಳ ಮುಖ್ಯೋಪಾಧ್ಯಾಯಿನಿಯರು ಹಾಗು ಪಾಲಕರ ಉಪಸ್ಥಿತಿಯಲ್ಲಿ ತಾಲೂಕಿನ ಶಿಕ್ಷಣ ಸಂಯೋಜಕರಾದ ಜಗದೀಶ್‍ರವರು ಉದ್ಘಾಟಿಸಿದರು. ವಿದ್ಯಾರ್ಥಿಗಳು ಶಿಕ್ಷಕರ ಸಹಾಯದಿಂದ ಅತ್ಯಂತ ಆಸಕ್ತಿಯಿಂದ ಇದರಲ್ಲಿ ಭಾಗವಹಿಸಿದರು. ಧ್ವನಿವರ್ದಕದ ಮೂಲಕ ಗ್ರಾಹಕರನ್ನು ತಮ್ಮತ್ತ ಆಕರ್ಷಿಸುವ ವೈಖರಿ ಮನಮುಟ್ಟುವಂತಿತ್ತು. ತಮ್ಮ ಜೀವನದಲ್ಲಿ ಮೇಲಿನ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಕಾರಿಯಾಯಿತೆಂದು ವಿದ್ಯಾರ್ಥಿಗಳು ತಮ್ಮ ಸಂತೋಷ ವ್ಯಕ್ತ ಪಡಿಸಿದರು.  

 

ಸಿಸ್ಟರ್ ಮೇರಿ ಎಲ್ ಲೋಪಿಸ್, ಮುಖ್ಯೋಪಾಧ್ಯಾಯಿನಿ
ಸಂತ ಜೋಸೆಫರ ಕನ್ನಡ ಹಿ.ಪ್ರಾ. ಶಾಲೆ, ಕೆ. ಆರ್. ನಗರ.

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]