Dec 14: ಮೂವತ್ತೆರಡು ವರ್ಷಗಳ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಸಂತ ಜೋಸೆಫರ ಕನ್ನಡ ಮಾಧ್ಯಮ ಶಾಲೆ ಕೆ.ಆರ್.ನಗರದಲ್ಲಿ ಎರಡು ದಿನಗಳ ಕ್ರೀಡೋತ್ಸವವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮಾನ್ ರಾಜು, ಶಾಲಾ ಸಂಚಾಲಕಿ ಸ.ಪುಷ್ಪಾ ಹಾಗು ವೇದಿಕೆ ಅಲಂಕರಿಸಿದ ಇತರ ಗಣ್ಯರು ಕ್ರೀಡಾಜ್ಯೋತಿ ಬೆಳಗಿಸಿ, ಶಾಂತಿದೂತ ಪಾರಿವಾಳ ಹಾರಿಸುವುದರ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ಪಥಸಂಚಲನದ ಮೂಲಕ ಧ್ವಜಾವಂದನೆಯನ್ನು ಮಾಡಿ ಗಣ್ಯರನ್ನು ವಂದಿಸಲಾಯಿತು. ತಮ್ಮ ಉದ್ಘಾಟನಾ ಭಾಷಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರೀಡೋತ್ಸವ ಯಶಸ್ಸು ಕಾಣಲಿ ಸೋಲು-ಗೆಲುವನ್ನು ಸಮಾನಾಗಿ ಸ್ವೀಕರಿಸುವ ಮನೋಭಾವ ವಿದ್ಯಾರ್ಥಿಗಳಲ್ಲಿ ಬೆಳೆಯಲಿ ಎಂದು ಹಾರೈಸಿದರು. ನಂತರ ವಿದ್ಯಾರ್ಥಿಗಳಿಗೆ ಗುಂಪಿನಲ್ಲಿ ಕ್ರೀಡೆಗಳನ್ನು ಆಡಿಸಲಾಯಿತು.

ಎರಡನೇ ದಿನ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿದ ಧರ್ಮಕೇಂದ್ರದ ಗುರುಗಳು, ವಿದ್ಯೆ ಮತ್ತು ಕ್ರೀಡೆ ಒಂದೇ ನಾಣ್ಯದ ಎರಡು ಮುಖಗಳು. ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಮನಸ್ಸನ್ನು ಪ್ರಫುಲ್ಲಗೊಳಿಸುತ್ತವೆ ಎಂದು ಹೇಳುತ್ತಾ ಹಬ್ಬದೋಪಾದಿಯಲ್ಲಿ ಆಚರಿಸಲಾದ ಈ ಕ್ರಿಡೋತ್ಸವದ ರೂವಾರಿಗಳಾದ ಮುಖ್ಯಶಿಕ್ಷಕಿ ಸಹೋದರಿ ಮೇರಿ ದಿವ್ಯಾ ಲೋಪಿಸ್, ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪಾಲಕರು ಹಾಗೂ ಹಳೇ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಆಟ ಈ ದಿನದ ವಿಶೇಷತೆಗಳಲ್ಲಿ ಒಂದಾಗಿತ್ತು. ವಿದ್ಯಾರ್ಥಿಗಳು ವಿವಿಧ ಕಾರ್ಯಕ್ರಮಗಳ ಮೂಲಕ ವೀಕ್ಷಕರ ಗಮನ ಸೆಳೆದರು.

ಪ್ರೇಮಲತಾ ಡಿಸೋಜ, ಸಹಶಿಕ್ಷಕಿ
ಸಂತ ಜೋಸೆಫರ ಕನ್ನಡ ಮಾಧ್ಯಮ ಶಾಲೆ ಕೆ.ಆರ್.ನಗರ