Dec 16: ಬದುಕಿನಲ್ಲಿ ಕ್ರೀಡೆ ಇಲ್ಲದಿದ್ದಾಗ, ಅದು ಹಕ್ಕಿ ತಂದ ಹಣ್ಣಿನಂತೆ; ಹಾಗಾಗಿ ಪ್ರಯೋಜನಕಾರಿ ಬಾಳ್ವೆ ನಮ್ಮದಾಗಿಸಲು ವಿದ್ಯಾರ್ಥಿಗಳಾಗಿರುವಾಗಲೇ ಪ್ರಯತ್ನಿಸೋಣ’’ ಎಂಬುದಾಗಿ ಮಕ್ಕಳಿಗೆ ಉತ್ತೇಜನಕಾರಿ ಸಂದೇಶವನ್ನು ಶ್ರೀ ಸುಕುಮಾರ ಎನ್. ರವರು ನೀಡಿದರು. ಸಂತ ಪೌಲರ ಪ್ರೌಢಶಾಲೆ, ಬಳಕುಂಜೆಯಲ್ಲಿ ದಿನಾಂಕ 22.11.2019 ರಂದು ಆಯೋಜಿಸಿದ ಕ್ರೀಡಾಕೂಟದ ಮುಖ್ಯ ಅತಿಥಿಗಳಾಗಿ ಅವರು ಉಪಸ್ಥಿತರಿದ್ದರು.

ಕ್ರೀಡಾಜ್ಯೋತಿಯ ಜ್ವಲನದೊಂದಿಗೆ ಮಾತನಾಡಿದ ಹೋಲಿ ಪ್ಯಾಮಿಲಿ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಶ್ರೀ ಪ್ರಶಾಂತ್ ಎಚ್. ರವರು ‘ಮಕ್ಕಳು ಪ್ರತಿವರ್ಷ ಹೊಸ ಹೊಸ ವಿಧಾನಗಳೊಂದಿಗೆ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದಾಗ ಸೃಜನಶೀಲತೆಗೆ ಅದು ದಾರಿಮಾಡಿಕೊಡುತ್ತದೆ’ ಎಂಬುದನ್ನು ಮನವರಿಕೆ ಮಾಡಿದರು.

ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಕ್ರೀಡಾಮಂತ್ರಿ ನಿಶಾಲ್ ಡಿಸೋಜರವರು ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋದಿಸಿದರು. ಶಾಲಾ ಮಖ್ಯೋಪಾಧ್ಯಾಯಿನಿ ಭಗಿನಿ ಸಿಸ್ಟರ್ ಪೊಲೆಟ್‍ರವರು ಸರ್ವರನ್ನು ಸ್ವಾಗತಿಸಿ, ಶಿಕ್ಷಕ ನಾಗರಾಜ್ ವಂದನಾರ್ಪಣೆಗೈದರು. ಶಿಕ್ಷಕಿ ಸಿಲ್ವಿಯಾ ಮರಿಯಾ ಮಿನೇಜಸ್ ರವರು ಕಾರ್ಯಕ್ರಮ ನಿರೂಪಿಸಿದರು.

 

 

ಭಗಿನಿ ಸಿಸ್ಟರ್ ಪೊಲೆಟ್, ಮಖ್ಯೋಪಾಧ್ಯಾಯಿನಿ
ಸಂತ ಪೌಲರ ಪ್ರೌಢಶಾಲೆ, ಬಳಕುಂಜೆ

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]