Feb 03: ದಿನಾಂಕ 29.01.20ರಂದು ಬೆಥನಿ ಪ್ರೌಢ ಶಾಲೆಯಲ್ಲಿ ಜಯಾ ಫೌಂಡೇಶನ ಮತ್ತು ಸೈಟ್ರೇಟನ ಸಹಯೋಗದೊಂದಿಗೆ “ಸಮದೃಷ್ಟಿ” ಎಂಬ ಕಣ್ಣಿನ ತಪಾಸಣಾ ಶಿಬಿರವನ್ನು ನಡೆಸಲಾಯಿತು. 5ನೇ ತರಗತಿಯಿಂದ 10ನೇ ತರಗತಿಯವರೆಗೆ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಕಲಬುರಗಿ ಜಿಲ್ಲಾ ನೇತ್ರ ತಜ್ಞರ ತಂಡ ಆಗಮಿಸಿ ಉಚಿತವಾಗಿ ಮಕ್ಕಳ ಕಣ್ಣಿನ ತಪಾಸಣೆ ಮಾಡಿದರು. ಈ ಶಿಬಿರಕ್ಕೆ ಚಿತ್ತಾಪೂರ ನಗರದಲ್ಲಿರುವ ಸರಕಾರಿ ಹಾಗೂ ಇನ್ನಿತರ ಶಾಲೆಯ ಮಕ್ಕಳು ಕೂಡ ಆಗಮಿಸಿ ಇದರ ಸದುಪಯೋಗವನ್ನು ಪಡೆದುಕೊಂಡರು. ಮತಕ್ಷೇತ್ರದ ಜನಪ್ರೀಯ ಶಾಸಕರು ಹಾಗೂ ಮಾಜಿ ಸಚಿವರು ಆದ ಶ್ರೀ ಸನ್ಮಾನ್ಯ ಪ್ರೀಯಾಂಕ ಖರ್ಗೆಯವರು ಭೇಟಿ ನೀಡಿ ಶಿಬಿರದ ಬಗ್ಗೆ ಮಾಹಿತಿಯನ್ನು ಪಡೆದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶ್ರೀಮತಿ ಶಂಕ್ರಮ್ಮ ಢವಳಗಿ ಹಾಗೂ ಮುಖ್ಯೋಪಾಧ್ಯಾಯನಿಯರಾದ ಭಗಿನಿ ಸಿಸ್ಟರ್ ಲೂಸಿ ಕ್ಲೇರ್ ಹಾಗೂ ಭಗಿನಿ ಸಿಸ್ಟರ್ ಕವಿತಾ ಬಿಎಸ್ ರವರು ಉಪಸ್ಥಿತರಿದ್ದರು. ಶಿಬಿರವು ಯಶಸ್ವಿಯಾಗಿ ನಡೆಯಿತು. ಕಣ್ಣಿನ ತೊಂದರೆ ಇರುವ ಮಕ್ಕಳಿಗೆ ಕನ್ನಡಕವನ್ನು ಹಾಕಿಕೊಳ್ಳುವಂತೆ ಸಲಹೆ ನೀಡಿದರು.

ಸಿ.ಕವಿತಾ ಬಿಎಸ್, ಮುಖ್ಯೋಪಾಧ್ಯಾಯನಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ