Feb 29: ಸಂತ ಸೆಬಾಸ್ಟಿಯನ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬೆಂದೂರು. ಇಲ್ಲಿ ದಿನಾಂಕ 18.02.2020ರಂದು ನಮ್ಮ ಶಾಲೆಗೆ ಬೆಥನಿ ಸಂಸ್ಥೆಯ ಮಹಾಮಾತೆ ಭಗಿನಿ ರೋಜ್ ಸೆಲಿನ್ ರವರು ಭೇಟಿ ನೀಡಿದರು. ಇವರ ಜೊತೆಯಲ್ಲಿ ಬೆಥನಿ ವಿದ್ಯಾ ಸಂಸ್ಥೆಗಳ ಮೇಲ್ವಿಚಾರಕಿ ಭಗಿನಿ ಕ್ಲಿಯೋಫ ಹಾಗೂ ಸ್ಥಳೀಯ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಅನಿತಾ ಶಾಂತಿ ಇವರು ಉಪಸ್ಥಿತರಿದ್ದರು. ಇವರನ್ನು ಆರತಿಯ ಮುಖಾಂತರ ಬರಮಾಡಿಕೊಂಡೆವು.

ಶಾಲಾ ಮುಖ್ಯೋಪಾಧ್ಯಾಯಿನಿ ಸಿ.ನ್ಯಾನ್ಸಿ ಗಣ್ಯರನ್ನು ಹೂಗುಚ್ಛ ನೀಡಿ ಸ್ವಾಗತಿಸಿದರು. ಭಗಿನಿ ರೋಸ್ ಸೆಲಿನ್ ರವರ ಅಧ್ಯಕ್ಷತೆಯಲ್ಲಿ ಅಂದಿನ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ಸಂಭ್ರಮದಿಂದ ನಡೆಯಿತು.
ಮಕ್ಕಳು ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಶಾಲಾ ಸಂಸ್ಥಾಪಕರಾದ ರೆವರೆಂಡ್  ರೈಮಂಡ್ ಫ್ರಾನ್ಸಿಸ್ ಕಮಿಲ್ಲಸ್ ಮಸ್ಕರೇನಸ್ ರವರ ಬಾಲ್ಯ ಜೀವನದ ಕೆಲವು ಘಟನೆಗಳನ್ನು ಅಭಿನಯಿಸಿದರು.

ಮಹಾಮಾತೆಯವರು ಬೆಥನಿ ಸಂಸ್ಥೆಯ ಕೇಂದ್ರೀಯ ಮೌಲ್ಯಗಳನ್ನು ಮಕ್ಕಳಿಂದ ಹೇಳಿಸಿದರು. ನಾವು ನಮ್ಮ ಜೀವನದಲ್ಲಿ ಈ ಮೌಲ್ಯಗಳನ್ನು ಯಾವ ರೀತಿ ಅಳವಡಿಸಬಹುದು ಎಂಬುದರ ಬಗ್ಗೆ ಮಕ್ಕಳೊಡನೆ ಸಂಭಾಷಣೆ ಮಾಡಿದರು. ಹೆಚ್ಚಿನ ಮಕ್ಕಳು ಉತ್ತಮ ಪ್ರತಿಕ್ರಿಯೆ ನೀಡಿದರು. ಮಕ್ಕಳ ಉತ್ಸಾಹ, ಆಸಕ್ತಿ ಹಾಗೂ ಬುದ್ದಿಶಕ್ತಿಯನ್ನು ಕಂಡು ಮಹಾಮಾತೆಯವರು ಬಹಳ ಸಂತೋಷಪಟ್ಟರು. ಮಾತ್ರವಲ್ಲ ಮಕ್ಕಳ ಬಗ್ಗೆ ಹೆಮ್ಮೆಪಟ್ಟರು.

ಮುಂದುವರಿಸುತ್ತಾ ಸಭೆಯಲ್ಲಿರುವ ಎರೂ ಉತ್ತಮ ಮಾನವೀಯ ಜೀವನವನ್ನು ನಡೆಸಿ , ಸಮಾಜದಲ್ಲಿ ಸುಸಂಸ್ಕೃತ ನಾಗರೀಕರಾಗಿ ಬಾಳುವಂತೆ ಕರೆ ನೀಡಿದರು.

ಮಹಾಮಾತೆ ಭಗಿನಿ ರೋಸ್ ಸೆಲಿನ್ ರವರ ಆಗಮನ ನಮಗೆ ಹರುಷವನ್ನು ತಂದಿತು. ಸೂಕ್ತ ಮಾರ್ಗದರ್ಶನ, ಪೆÇ್ರೀತ್ಸಾಹವನ್ನು ನೀಡಿ ಉತ್ತಮ ಸಂದೇಶವನ್ನು ನೀಡಿದರು. ಸಂಸ್ಥೆಯ ಏಳಿಗೆಗಾಗಿ ದುಡಿಯುತ್ತಿರುವ ಶಾಲಾ ಮುಖ್ಯೋಪಾಧ್ಯಾಯಿನಿ ಹಾಗೂ ಶಿಕ್ಷಕವೃಂದದವರಿಗೆ ಅಭಿನಂದನೆ ಸಲ್ಲಿಸಿದರು.

ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.  

ಶ್ರೀಮತಿ ಪಾವ್ಲಿನ್ ಡಿಸೋಜ, ಸಹ ಶಿಕ್ಷಕಿ
ಸಂತ ಸೆಬಾಸ್ಟಿಯನ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬೆಂದೂರು