Nov 20: ಸರಕಾರದ ಆದೇಶದ ಮೇರೆಗೆ ದಿನಾಂಕ 01.11.2020ರಂದು ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ಬೆಥನಿ ಪ್ರೌಢ ಶಾಲೆಯಲ್ಲಿ ಸರಳ ರೀತಿಯಲ್ಲಿ ಆಚರಿಸಲಾಯಿತು. ಬೆಳಿಗ್ಗೆ 7.45 ಕ್ಕೆ ಬೆಥನಿ ಪ್ರೌಢ ಶಾಲೆಯ ಮುಖ್ಯಗುರುಗಳು ಹಾಗೂ ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳ ಜೊತೆಗೆ ಎರಡು ಶಾಲೆಯಗಳ ಶಿಕ್ಷಕ ವ್‍ಂದದವರು ಸೇರಿ ಚಿಕ್ಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿ, ಕರ್ನಾಟಕ ನಾಡದೇವಿಯಾದ ತಾಯಿ ಭುವನೇಶ್ವರಿಯವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಪೂಜೆಯನ್ನು ಸಲ್ಲಿಸಿ, ನಂತರ ರಾಷ್ಟ್ರೀಯ ಗೌರವದೊಂದಿಗೆ ರಾಷ್ಟ್ರಧ್ವಜ  ಆರೋಹಣಗೊಳಿಸಿ, ಹಾಗೂ ನಂತರ ನಾಡಗೀತೆಯನ್ನು ಹಾಡಿ ಕನ್ನಡಾಂಬೆಗೆ ಜೈಗೋಷವನ್ನು ಹಾಕಿದೆವು. ಕರ್ನಾಟಕ ರಾಜ್ಯೋತ್ಸವ ಕುರಿತು ಕನ್ನಡ ಸಹ ಶಿಕ್ಷಕಿಯರಾದ ಶ್ರೀಮತಿ ಅರ್ಚನಾ ಟೀಚರರವರು ಹಾಗೂ ಕರ್ನಾಟಕದ ಏಕೀಕರಣ ಇತಿಹಾಸ ಕುರಿತು ರಸಪ್ರಶ್ನೆ ಕಾರ್ಯಕ್ರವನ್ನು ಶಿಶುವಿಹಾರ ಶಾಲೆಯ ಸಹಶಿಕ್ಷಕರ ನೇರವೆರಿಸಿಕೊಟ್ಟರು. ಈ ಕಾರ್ಯಕ್ರಮವನ್ನು ವಂದನಾರ್ಪಣೆಯೊಂದಿಗೆ ಕೊನೆಗೊಳಿಸಲಾಯಿತು.

 

ಶ್ರೀಯುತ ವಿಶ್ವನಾಥ, ದೈಹಿಕ ಶಿಕ್ಷಕರು
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]