Jan 07: “ತರಬೇತಿ ಇಲ್ಲದೆ ತೇರ್ಗಡೆಯಾಗಲು ಸಾಧ್ಯವಿಲ್ಲ ಹಗಲಿರುಳು ಇಲ್ಲದೆ ವರ್ಷಗಳು ಉರುಳಲು ಸಾಧ್ಯವಿಲ್ಲ” ಎಂಬಂತೆ 2020-2021ನೇ ಸಾಲಿನಲ್ಲಿ ಸುಮಾರು 10ತಿಂಗಳುಗಳ ಕಾಲ ಕೋರೊನ ಮಹಾಮಾರಿಯ ವೈರಸ್ ನಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿ ಕುಂಠಿತವಾಗಿತ್ತು. ಇದನ್ನರಿತ ಸರ್ಕಾರವು ಆದೇಶಿಸಿದಂತೆ ದಿನಾಂಕ 01.01.2021 ರಿಂದ ಶಾಲೆಯನ್ನು ಪುನರಾರಂಭಿಸಲು ಅನುಮತಿಸಿದ್ದು, ಶಾಲಾ ಆವರಣವು ಮತ್ತೆ ಮಕ್ಕಳ ಮುಗ್ದ ಮಂದಹಾಸದಿಂದ ಕಂಗೊಳಿಸುವ ಕ್ಷಣ ಒದಗಿ ಬಂದದ್ದು ತುಂಬಾ ಸಂತೋಷವನ್ನುಂಟು ಮಾಡಿದೆ.

ಮುಕ್ತ ಮನಸಿನ ಮುಗ್ದ ಭಾವನೆ ಹೊಂದಿದ ಕಿರು ಪುಷ್ಪಗಳಂತಿರುವ ಮಕ್ಕಳ  ಹೂ ಮನಸು ಹಚ್ಚ ಹಸಿರಾಗಲು ಬೇಕಾದ ಸರ್ವಸಿದ್ದತೆಗಳಿಂದ ನಮ್ಮ ಶಿಶುವಿಹಾರ ಶಾಲೆಯು ಮತ್ತೊಮ್ಮೆ ಮಕ್ಕಳನ್ನು ಆತ್ಮೀಯತೆಯಿಂದ ಬರಮಾಡಿಕೊಂಡಿದ್ದು ಎಲ್ಲಾ ಶಿಕ್ಷಕರಲ್ಲಿ ಹಾಗೂ ಶಾಲಾ ಆಡಳಿತ ಮಂಡಳಿಯಲ್ಲಿ  ಸಂತಸದ ಕ್ಷಣವಾಗಿದೆ.

ಸುದೀರ್ಘ ಮಕ್ಕಳ ಅನುಪಸ್ಥಿತಿಯಿಂದಾಗಿ ಕಳೆಗುಂದಿದ್ದ ನಮ್ಮ ಶಾಲೆಯು ದಿನಾಂಕ 01.01.2021 ರಂದು ಮಕ್ಕಳ ಪುನರಾಗಮನದಿಂದ ಸಂಭ್ರಮದ ಕಳೆ ಕಟ್ಟಿದೆ. ಸರ್ಕಾರ  ನೀಡಿದ ಪ್ರತಿಯೊಂದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮಕ್ಕಳ  ಶೈಕ್ಷಣಿಕ ಹಾಗೂ ದೈಹಿಕ ಬೆಳವಣಿಗೆಗೆ ಶ್ರಮಿಸಿದ ನಮ್ಮ ಶಾಲೆಯ ಮುಖ್ಯಗುರುಗಳಾದ ಭಗಿನಿ.ಅವೆಲಿನ್ ರವರ  ಕಾರ್ಯವೈಖರಿ ಶ್ಲಾಘನೀಯ.

ಶ್ರೀಯುತ ವಿಶ್ವರಾಜ ಟೋನಿ, ಸಹ ಶಿಕ್ಷಕರು
ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆ ಚಿತ್ತಾಪೂರ.

 

 

 

 

 

 

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]