Feb 17: ಕೊರೋನ ಸಾಕು, ಶಾಲೆ ಬೇಕು. . . ಎನ್ನುತ್ತ ನಮ್ಮ ಶಾಲಾ ಆರು ಮತ್ತು ಏಳನೇ ತರಗತಿ ವಿದ್ಯಾರ್ಥಿಗಳು ಹೊಸ ವರ್ಷದ ದಿನ ಹರುಷದಿಂದ ಶಾಲೆಗೆ ಆಗಮಿಸಿದರು. ವಿವಿಧ ಭಿತ್ತಿ ಪತ್ರಗಳಿಂದ ಸುಸಜ್ಜಿತಗೊಂದ ಸೂಚನ ಫಲಕಗಳು ಹಾಗೂ ಶಿಕ್ಷಕರು ಇವರನ್ನು ನಗುಮುಖದೊಂದಿಗೆ ಸ್ವಾಗತಿಸಿದರು. ಸರ್ಕಾರದ ನಿರ್ದೇಶನದಂತೆ ಪ್ರಮಾಣಿತ ಕಾರ್ಯಾಚರಣಾ ವಿಧಾನ (SOP) ಪಾಲಿಸಿ ಎಲ್ಲ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ, ಸ್ಯಾನಿಟೈಜರ್ ಬಳಸಿ, ಸಾಮಾಜಿಕ ಅಂತರದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಯಿತು. ದೀಪ ಬೆಳಗುವುದರೊಂದಿಗೆ ಮುಖ್ಯ ಶಿಕ್ಷಕಿ ಭಗಿನಿ ಮೇರಿ ಲೋಪಿಸ್‍ರವರು ವಿದ್ಯಾರ್ಥಿಗಳಿಗೆ ಕೊರೋನ ನಿಯಮಗಳನ್ನು ತಿಳಿಸಿ ಮುಂಬರುವ ದಿನಗಳಲ್ಲಿ ಉತ್ತಮ ರೀತಿಯಲ್ಲಿ ಕಲಿಯಲು ಇಂದಿನಿಂದಲೇ ಪ್ರಾರಂಭಿಸಲು ತಿಳಿಸಿದರು. ಎಲ್ಲ ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ ಹೊಸವರ್ಷದ ಶುಭಾಶಯ ಕೋರಿ ಸಿಹಿ ಹಂಚಿದರು.

 

 

 

 

 

ಸಿಸ್ಟರ್ ಮೇರಿ ಲೋಪಿಸ್, ಮುಖ್ಯೋಪಾಧ್ಯಾಯಿನಿ
ಸಂತ ಜೋಸೆಫರ ಕನ್ನಡ ಹಿ. ಪ್ರಾ. ಶಾಲೆ, ಕೆ.ಆರ್. ನಗರ