ಮಾನ್ಯ ಪ್ರಧಾನಮಂತ್ಗಳು ಮನ್ ಕಿ ಬಾತ್‍ನಲ್ಲಿ ಗಂಗಾನದಿಯ ಮಹತ್ವದ ಬಗ್ಗೆ ಶಾಲಾ ಮಕ್ಕಳಿಗೆ ತಿಳಿಸಲು ಸೂಚಿಸಿರುವಂತೆ ಶಿಕ್ಷಣಾ ಇಲಾಖೆಯಿಂದ ಬನ್ನಿಮಂಟಪ ಶಾಲೆಯಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಸಂತ ಜೋಸೆಫರ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಬಹುಮಾನ ತಂದಿರುವುದು ನಮ್ಮ ಶಾಲೆಗೆ ಹೆಮ್ಮೆಯ ವಿಷಯವಾಗಿದೆ.

ಗಂಗಾ ನದಿಯ ಕುರಿತು ನಾಟಕ ಸ್ಪರ್ದೆಯಲ್ಲಿ 8ನೇ ತರಗತಿ ವಿದ್ಯಾರ್ಥಿಗಳಾದ ಭರತ್‍ಕುಮಾರ್, ಅಮೃತೇಶ್.ಎ ಹಾಗೂ ಪ್ರೇಮ್‍ವಿರೇಶ್‍ರಕ್ಕಸಗಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

ಗಂಗಾ ನದಿಯ ಪಾವಿತ್ರ್ಯತೆ ಪ್ರಬಂಧ ಸ್ಪರ್ಧೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿಗಳಾದ ಇಬ್ಬನಿ ಈಶ್ವರ್ ಇಂಗ್ಲೀಷ್ ಪ್ರಬಂಧದಲ್ಲಿ ಪ್ರಥಮ ಸ್ಥಾನ ಹಾಗೂ ದೇವಿಕಾ ಕನ್ನಡ ಪ್ರಬಂಧದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಗಂಗಾ ನದಿಯ ಕುರಿತು ರಸಪ್ರಶ್ನೆ ಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಾದ ನೂತನ ಆರ್.ಗೌಡ ಹಾಗೂ ಸುಹಾಸ್ ರವರು ಎರಡನೇ ಸ್ಥಾನ ಪಡೆದಿದ್ದಾರೆ.

ಗಂಗಾ ನದಿ ನೃತ್ಯ ಸ್ಪರ್ಧೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿಯರಾದ ಲಾಸ್ಯ ದ್ವಿತೀಯ ಸ್ಥಾನ, ರಕ್ಷಿತಾ ಮೂರನೇ ಸ್ಥಾನ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಯಾದ ದೃತಿ ಪ್ರಥಮ ಸ್ಥಾನ ಮತ್ತು ಘೋಷಣಾ ವಾಕ್ಯದಲ್ಲಿ 9ನೇ ತರಗತಿ ವಿದ್ಯಾರ್ಥಿನಿಯಾದ ಸುರಬಿ 3ನೇ ಸ್ಥಾನ ಪಡೆದಿರುವುದು ನಮ್ಮ ಹಮ್ಮೆಯ ವಿಷಯ. ಇವರೆಲ್ಲರಿಗೂ, ಅವರನ್ನು ತರಬೇತುಗೊಳಿಸಿದ ಶಿಕ್ಷಕರಿಗೂ ಅಭಿನಂದನೆಗಳು.

 

 

 

ಶ್ರೀಮತಿ. ವಿನುತಾ, ಸಹ ಶಿಕ್ಷಕರು
ಸಂತ ಜೋಸೆಫರ ಪ್ರೌಢಶಾಲೆ, ಕೆ.ಆರ್. ನಗರ