ಶಾಲಾ ಸಂಚಾಲಕಿಯವರಾದ ಸಿಸ್ಟರ್ ಪುಷ್ಪರವರು ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿಯವರಾದ ಸಿಸ್ಟರ್ ಬೆಟ್ಟಿ ಡಿ.ಕೋಸ್ಟರವರ ಸಹಕಾರದೊಂದಿಗೆ ದಿನಾಂಕ 12-03-2022 ರಂದು ಸಂತ ಜೋಸೆಫರ ಪ್ರೌಢಶಾಲೆ, ಕೆ.ಆರ್. ನಗರದಲ್ಲಿ “ಸಂತಜೋಸೆಫರ ದಿನ” ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಶಾಲೆಯ ಸಂಚಾಲಕಿಯವರು, ಮುಖ್ಯೋಪಾಧ್ಯಾಯನಿಯವರು ಮತ್ತು ಶಿಕ್ಷಕ ವೃಂಧದವರು ಹಾಗೂ ಶಾಲಾ ಮಂತ್ರಿಮಂಡಲದ ನಾಯಕರುಗಳು ದೀಪ ಬೆಳಗಿಸಿ, ಪ್ರಾರ್ಥನೆಯ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು.

9ನೇ ತರಗತಿಯ ವಿದ್ಯಾರ್ಥಿಗಳು ಸಂತಜೋಸೆಫರ ಕಿರುನಾಟಕದ ಮೂಲಕ ಅವರ ಜೀವನದ ಮಹತ್ವವನ್ನು ಬಿಂಬಿಸಿ ಮತ್ತು ನೃತ್ಯಗಳು, ಹಾಸ್ಯ ನಾಟಕದ ಮೂಲಕ ಶಾಲೆಯ ಕೀರ್ತಿಯನ್ನು ಸಾರಿದರು. ಕಾರ್ಯಕ್ರಮದ ಉಸ್ತುವಾರಿಯನ್ನು 9ನೇ ತರಗತಿಯ ಶಿಕ್ಷಕರುಗಳಾದ ಶ್ರೀಮತಿ ಮಂಜುಳ, ಶ್ರೀಮತಿ ವಿದ್ಯಾ ಮತ್ತು ಶ್ರೀಮತಿ ವಿಶಾಲಾಕ್ಷಿರವರುಗಳು ವಹಿಸಿದ್ದರು.

 

 

 

 

 

 

 

 

 

 

 

ಶ್ರೀಮತಿ ಮಂಜುಳ, ಸಹಶಿಕ್ಷಕಿ
ಸಂತಜೋಸೆಫರ ಪ್ರೌಢಶಾಲೆ, ಕೆ.ಆರ್.ನಗರ

 

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]