June 30: “ಧೈರ್ಯವೇ ಎಲ್ಲದಕ್ಕೂ ಮೂಲ ಸಾಧನ” ಎಂಬಂತೆ ಕಲಬುರಗಿ ಜಿಲ್ಲೆಯ ಚಿತ್ತಾಪೂರ ಮತ್ತು ಶಾಹಬಾದ ವಿಭಾಗ ಪೋಲಿಸ್ ಇಲಾಖೆಯ ವತಿಯಿಂದ ದಿನಾಂಕ 22.06.2022 ರ ಬುಧವಾರದಂದು ನಮ್ಮ ಶಾಲೆಯಲ್ಲಿ ‘ಹೆಣ್ಣು ಮಕ್ಕಳ ಸ್ವಯಂ ರಕ್ಷಣಾ ಅಭಿಯಾನ’ ಕುರಿತು ಒಂದು ಚಿಕ್ಕ ಕಾರ್ಯಕ್ರಮ ನಡೆಯಿತು. ಬಂದ ಅತಿಥಿ ಗಣ್ಯರನ್ನು ಮುಖ್ಯೋಪಾಧ್ಯಾಯಿನಿ ಸಿ.ಕವಿತಾರವರ ಅಧ್ಯಕ್ಷತೆಯಲ್ಲಿ ಶ್ರೀಯುತ ವಿಶ್ವನಾಥ ಅವರು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಪೋಲಿಸ್ ಅಧಿಕಾರಿಣಿಯೊಬ್ಬರು ತನ್ನ ಗುಂಪಿನವರ ಜೊತೆಗೂಡಿ ಹೆಣ್ಣಿನ ಮೇಲೆ ಆಗುವ ಚಿಕ್ಕ ಚಿಕ್ಕ ಆಕ್ರಮಣಗಳಿಂದ ತಪ್ಪಿಸಿಕೊಳ್ಳುವ ಸರಳವಾದ ತಂತ್ರಗಳನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿದರು. ನಂತರ ಮಕ್ಕಳಿಗೆ ವೇದಿಕೆಗೆ ಕರೆದು ಅವರಿಂದಲೂ ಕೂಡ ಆ ತಂತ್ರಗಳನ್ನು ಬಳಸಿ ಹೇಗೆ ತಮ್ಮನ್ನು ತಾವು ಸುಲಭವಾಗಿ ರಕ್ಷಣೆ ಮಾಡಿಕೊಳ್ಳಬಹುದೆಂಬುದನ್ನು ಮನದಟ್ಟು ಮಾಡಿಸಿದರು.

ಕೊನೆಗೆ ಶ್ರೀಮತಿ ಅರ್ಚನಾ, ಅವರು ಹೇಳಿಕೊಟ್ಟಂತಹ ಧೈರ್ಯದ ಸಾಧನ ತಂತ್ರಗಳನ್ನು ಮರುಕಳಿಸುತ್ತಾ ವಂದನಾರ್ಪಣೆ ಹೇಳುವುದರ ಮೂಲಕ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

 

 

 

 

 

 

 

ಶ್ರೀಮತಿ ಅರ್ಚನಾ (ಸಹ ಶಿಕ್ಷಕಿ)
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

 

 

 

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]