July 12: ಸಂತ ಜೋಸೆಫರ ಪ್ರೌಢಶಾಲೆ, ಕೆ.ಆರ್.ನಗರ ಶಾಲೆಯಲ್ಲಿ ಪ್ರತಿ ವರ್ಷ ನಡೆಯುವ ಹಾಗೆ 2022-23ನೇಯ ಶೈಕ್ಷಣಿಕ ವರ್ಷದ ಜುಲೈ ತಿಂಗಳ ಮಾಸಿಕ ಸ್ಪರ್ಧೆಯಾಗಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಮುಖ್ಯ ಶಿಕ್ಷಕಿಯವರಾದ ಭಗಿನಿ ಜೀವನ್ ಅವರು ಕುಂಚದಿಂದ ವರ್ಣಚಿತ್ರ ರಚಿಸುವುದರ ಮೂಲಕ ಈ ಸ್ಪರ್ಧೆಗೆ ಚಾಲನೆಯನ್ನು ನೀಡಿದರು. ವಿದ್ಯಾರ್ಥಿಗಳಿಗೆ ಓದು ಬರಹದ ಜೊತೆಗೆ ಚಿತ್ರಕಲೆಯೂ ಸಹಾ ಅವಶ್ಯಕ ಏಕೆಂದರೆ ಅದು ಮಕ್ಕಳಲ್ಲಿ ಏಕಾಗ್ರತೆಯನ್ನು, ಸ್ಮರಣಾಶಕ್ತಿಯನ್ನು ವೃದ್ಧಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರು ಚಿತ್ರಕಲೆಯನ್ನು ಆಸಕ್ತಿಯಿಂದ ಕಲಿಯಬೇಕು ಎಂದು ಹಿತವಚನವನ್ನು ಹೇಳಿದರು.

ಈ ಸ್ಪರ್ಧೆಗೆ ವಿಷಯವಾಗಿ 8ನೇ ತರಗತಿಗೆ “ವಿಶ್ವ ಪರಿಸರ ದಿನ”, 9ನೇ ತರಗತಿಗೆ “ವಿಶ್ವಯೋಗ ದಿನ”, 10ನೇಯ ತರಗತಿಗತಿಗೆ ಶಾಲಾ ಸಂಸ್ಥಾಪಕರಾದ “ರೇಮಂಡ್ ಫ್ರಾನ್ಸಿಸ್ ಕಮಿಲಸ್ ಮಸ್ಕರೇನಸ್” ಅವರ ವರ್ಣ ಚಿತ್ರವನ್ನು ಬರೆಯಲು ನೀಡಲಾಗಿತ್ತು. ಮಕ್ಕಳೆಲ್ಲರೂ ಅತ್ಯಂತ ಉತ್ಸಾಹದಿಂದ ವರ್ಣಚಿತ್ರಗಳನ್ನು ರಚಿಸಿದರು.

 

 

ಶ್ರೀ. ಗುರುರಾಜ, ಚಿತ್ರಕಲಾ ಶಿಕ್ಷಕರು
ಸಂತಜೋಸೆಫರ ಪ್ರೌಢಶಾಲೆ, ಕೆ.ಆರ್.ನಗರ