Sep 20: 2022-23ನೇ ಸಾಲಿನ ಕಲ್ಯಾಣ ಕರ್ನಾಟಕ ಮತ್ತು ವಿಶ್ವಕರ್ಮ ದಿನಾಚರಣೆಯನ್ನು ಸೆಪ್ಟೆಂಬರ್ 17 ರಂದು ಬೆಥನಿ ಪ್ರೌಢ ಶಾಲೆ ಮತ್ತು ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಗಳು ಜಂಟಿಯಾಗಿ ಆಚರಿಸಿದವು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮೋಕ್ಷದ ರಾಣಿ ದೇವಾಲಯದ ಮುಖ್ಯ ಧರ್ಮಗುರುಗಳಾದ ಫಾದರ್ ಫೆಡ್ರಿಕ್ ಡಿಸೋಜಾರವರು ಆಗಮಿಸಿದ್ದರು. ಹಾಗೆಯೇ ಅತಿಥಿಗಳಾಗಿ ಬೆಥನಿ ಪ್ರೌಢ ಶಾಲೆ ಮತ್ತು ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಸಿಸ್ಟರ್ ಕವಿತಾ ಮತ್ತು ಸಿಸ್ಟರ್ ಅವೆಲಿನ್‍ರವರು ಮತ್ತು ಪ್ರಭಾರಿ ಮುಖ್ಯ ಗುರುಗಳಾದ ಶ್ರೀ ಶಿವಕಾಂತರವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಮಕ್ಕಳ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಸಮಾರಂಭಕ್ಕೆ ಆಗಮಿಸಿದಂತಹ ಗಣ್ಯ ಅಥಿತಿಗಳಿಗೆ ಬೆಥನಿ ಸಂಸ್ಥೆಯ ಪರವಾಗಿ ಸ್ವಾಗತವನ್ನು ಕೋರಲಾಯಿತು. ಉಕ್ಕಿನ ಮನುಷ್ಯ ಸರ್ದಾರ ವಲ್ಲಾಭಾಯಿ ಪಟೇಲ್ ಮತ್ತು ವಿಶ್ವಕರ್ಮರವರ ಭಾವಚಿತ್ರಗಳಿಗೆ ಅತಿಥಿಗಳು ಪೂಜೆ ಸಲ್ಲಿಸಿದರು. ಧ್ವಜಾರೋಹಣ ಕಾರ್ಯಕ್ರಮವನ್ನು ಫಾದರ್ ಫೆಡ್ರಿಕ್ ಡಿಸೋಜಾರವರು ನೆರವೇರಿಸಿದರು. ಕಾರ್ಯಕ್ರಮವು ಭಾಷಣಗಳು ಮತ್ತು ನಾಟಕದೊಂದಿಗೆ ಮುಂದುವರಿಯಿತು.

ಕ್ರೀಡೆ ಎಂಬುದು ಶಿಕ್ಷಣದ ಅವಿಭಾಜ್ಯ ಅಂಗ. ಅಂತಹ ವಾಲಿಬಾಲ್ ಕ್ರೀಡೆಯಲ್ಲಿ ಬೆಥನಿ ಪ್ರೌಢ ಶಾಲೆ ಮತ್ತು ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಯ ಹುಡುಗರು ಮತ್ತು ಹುಡುಗಿಯರು ತಾಲೂಕು ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದ ದಸರಾ ಕ್ರೀಡೋತ್ಸವದಲ್ಲಿ ಭಾಗವಹಿಸಿ ಪ್ರಥಮ ಬಹುಮಾನವನ್ನು ಪಡೆದುಕೊಂಡರು. ಗೆದ್ದು ಬೀಗಿರುವ ಎಲ್ಲಾ ಮಕ್ಕಳಿಗೆ ಫಾದರ್ ಫೆಡ್ರಿಕ್ ಡಿಸೋಜಾ, ಸಿ.ಕವಿತಾ ಮತ್ತು ಸಿ.ಅವೆಲಿನ್‍ರವರು ಬಹುಮಾನ ವಿತರಣೆಯನ್ನು ಮಾಡಿದರು. ಕಾರ್ಯಕ್ರಮವು ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.

 

 

 

 

 

 

ಶ್ರೀಮತಿ ಸುಷ್ಮಾ(ಸಹ ಶಿಕ್ಷಕಿ)
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ