‘ಜನ ಸೇವೆಯೇ ಜನಾರ್ಧನ ಸೇವೆ’ ಎಂಬ ನುಡಿಯಂತೆ ಶ್ರೀ ಎಸ್ ಎಮ್ ಸೋನಾರ್‍ಕರ್ (ನಿವೃತ್ತ ಕೆ.ಜಿ.ಬಿ ಬ್ಯಾಂಕ್ ವ್ಯವಸ್ಥಾಪಕರು) ಇವರು ಕೆನರಾ ಬ್ಯಾಂಕ್ ವತಿಯಿಂದ ಕೆಲವು ಶಾಲೆಗಳಿಗೆ ಭೇಟಿ ಕೊಟ್ಟು ಮಕ್ಕಳಿಗೆ ಆರ್ಥಿಕ ಸಾಕ್ಷರತಾ ಕೇಂದ್ರ ಎಂಬ ಕಾರ್ಯಕ್ರಮವನ್ನು ತನ್ನ ಸ್ವಇಚ್ಛೆಯಿಂದ ನಡೆಸುತ್ತಿದ್ದಾರೆ. ಅದೇ ರೀತಿ ದಿನಾಂಕ 15.10.2022 ರ ಶನಿವಾರದಂದು ಚಿತ್ತಾಪುರದ ಬೆಥನಿ ಪ್ರೌಢ ಶಾಲಾ ಮಕ್ಕಳಿಗೆ ಬ್ಯಾಂಕಿನ ಸೌಲಭ್ಯಗಳ ಬಗ್ಗೆ ವಿವರ ನೀಡುತ್ತ ಉಪನ್ಯಾಸವನ್ನು ನೀಡಿದರು. ಅವರ ಉಪನ್ಯಾಸದಲ್ಲಿ ಬ್ಯಾಂಕ ಎಂದರೇನು? ಬ್ಯಾಂಕಿನ ಕಾರ್ಯಗಳು, ಸಾಲಗಳಲ್ಲಿರುವ ಪ್ರಕಾರಗಳ ಬಗ್ಗೆ ಸವಿವರವಾಗಿ ವಿವರಿಸಿದರು. ಅದರಲ್ಲೂ ಪ್ರತ್ಯೇಕವಾಗಿ ಶಿಕ್ಷಣ ಸಾಲದ ಬಗ್ಗೆ ಬಹು ಆಸಕ್ತಿಯಿಂದ, ಕಾಳಜಿಪೂರ್ವಕವಾಗಿ ಮಕ್ಕಳಿಗೆ ತಿಳಿಸಿ ಹೇಳಿದರು.

ಮಕ್ಕಳು ಓದಿನ ಕಡೆಗೆ ಹೆಚ್ಚಿನ ಗಮನ ಕೊಟ್ಟು ಸಮಾಜದಲ್ಲಿ ಒಬ್ಬ ಜವಾಬ್ದಾರಿಯುತ ಪ್ರಜೆಯಾಗಬೇಕೆಂಬುದನ್ನು ಸ್ವತ: ತನ್ನ ಮಕ್ಕಳ ಕಲಿಕೆಯ ಉದಾಹರಣೆಗಳನ್ನು ಕೊಡುತ್ತ ಮಕ್ಕಳಲ್ಲಿ ಓದಿನ ಆಸಕ್ತಿಯನ್ನು ಮೂಡಿಸಲು ಪ್ರಯತ್ನಿಸಿದರು.


ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದೇನೆ ಎಂಬ ಕೀಳರಿಮೆಯನ್ನು ತೆಗೆದು ಹಾಕಿ, ಬಡವರು ನಮ್ಮಿಂದ ಮುಂದಿನ ಓದು ಮುಂದುವರೆಸಲು ಆಗುವುದಿಲ್ಲ ಎಂಬ ನಿಸ್ಸಾಹಾಯಕತೆಯನ್ನು ಮನಸ್ಸಿನಿಂದ ಕಿತ್ತು ತೆಗೆದು ಸರ್ಕಾರದಿಂದ ಪಡೆಯಬಹುದಾದ ಶಿಕ್ಷಣದ ಹಲವು ಸಾಲಗಳ ಬಗ್ಗೆ ಮಕ್ಕಳಿಗೆ ಮನ ಮುಟ್ಟುವಂತೆ ತಿಳಿಸಿ ಕೊಟ್ಟರು.

 

 

 

 

 

 

 

ಶ್ರೀಮತಿ ಅರ್ಚನಾ, ಸಹ ಶಿಕ್ಷಕಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

 

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]