Nov 05: 67 ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಸರ್ಕಾರದ ವತಿಯಿಂದ ಅಕ್ಟೋಬರ್ 28 ರಂದು ಆಯೋಜಿಸಲಾಗಿದ್ದ ಕನ್ನಡ ಭಾಷೆಯ, ನಮ್ಮ ಕರ್ನಾಟಕ ರಾಜ್ಯದ ಸಂಸ್ಕøತಿ, ಪರಂಪರೆಯನ್ನು ಸಾರುವ ಒಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೈಶಿಷ್ಠ ಪೂರ್ಣ ಗಾಯನ ಕಾರ್ಯಕ್ರಮವನ್ನು ನಮ್ಮ ಕರ್ನಾಟಕ ರಾಜ್ಯಾದ್ಯಾಂತ ಹಮ್ಮಿಕೊಳ್ಳಲಾಗಿತ್ತು, ಅದರಂತೆ ನಮ್ಮ ಶಾಲೆಗಳಲ್ಲಿಯೂ ಕನ್ನಡ ಭಾಷೆಯ ಸಂಸ್ಕøತಿ, ಪರಂಪರೆ, ಐಕ್ಯತೆಯನ್ನು ಎತ್ತಿ ಹಿಡಿಯುವ ಕೋಟಿ ಕಂಠಗೀತ ಗಾಯನ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳಲ್ಲಿ ಕನ್ನಡ ಅಭಿಮಾನವನ್ನು ಹೆಚ್ಚಿಸುವಂತೆ ಇಲಾಖೆಯಿಂದ ಆಯ್ಕೆಗೊಂಡಿದ್ದ ಆರು ದೇಶ ಭಕ್ತಿ ಗೀತೆಗಳನ್ನು ಹಾಡಿಸಲಾಯಿತು.

ದೇಶ ಭಕ್ತಿ ಗೀತೆಗಳೊಂದಿಗೆ ಅಕ್ಟೋಬರ್ 28 ಬೆಳಿಗ್ಗೆ 11.00 ಗಂಟೆಯ ಸಮಯಕ್ಕೆ ಕೋಟಿ ಕಂಠಗೀತ ಗಾಯನವನ್ನು ಪ್ರಾರಂಭಿಸಲಾಯಿತು, ನಮ್ಮ ಸಂಸ್ಥೆಯ ಮೂರು ಶಾಲೆಗಳಾದ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಆಂಗ್ಲಮಾಧ್ಯಮ ಶಾಲೆ ಮತ್ತು ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮದ ಎಲ್ಲಾ ವಿದ್ಯಾರ್ಥಿಗಳು , ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದ ಎಲ್ಲರೂ ಕನ್ನಡ ಅಭಿಮಾನಕ್ಕೆ ಸಾಕ್ಷಿಯಾಗಿ ಗೀತ ಗಾಯನವನ್ನು ಯಶಸ್ವಿಯಾಗಿಸಿದರು.

ಈ ವರ್ಣಿಸಲಾಗದ ಅತ್ಯದ್ಭುತ ಕಾರ್ಯಕ್ರಮದಲ್ಲಿ ನಮ್ಮ ಸಂತ ಜೋಸೆಫರ ಶಾಲೆಯ ಮುಖ್ಯ ಶಿಕ್ಷಕಿಯರುಗಳಾದ ಸಿಸ್ಟರ್ ಜೀವನ್, ಸಿಸ್ಟರ್ ಮೋಲಿ ಮತ್ತು ಸಿಸ್ಟರ್ ರೀಮಾ ರವರು ಅತಿಥಿಗಳಾಗಿ ಗೀತ ಗಾಯನದಲ್ಲಿ ಧ್ವನಿಗೂಡಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡುವ ಮೂಲಕ ಕನ್ನಡಾಭಿಮಾನಕ್ಕೆ ಸಾಕ್ಷಿಯಾದರು.

ಪ್ರೌಢಶಾಲೆಯ ಕನ್ನಡ ಶಿಕ್ಷಕರಾದ ಶ್ರೀಯುತ ಪ್ರಶಾಂತ್‍ರವರು ಎಲ್ಲರನ್ನು ಹೃದಯ ತುಂಬಿ ಕಾರ್ಯಕ್ರಮಕ್ಕೆ ಸ್ವಾಗತಿಸಿದರು, ಪ್ರಾಥಮಿಕ ಶಾಲಾ ಆಂಗ್ಲಮಾಧ್ಯಮದ ದೈಹಿಕ ಶಿಕ್ಷಕಿಯವರಾದ ಶ್ರೀಮತಿ ಸೈಮೋಲ್ ರವರು ಗೀತೆಗಳನ್ನು ಕ್ರಮವಾಗಿ ಹಾಡಿಸಿದರು. ನಂತರ ಪ್ರಾಢಶಾಲೆಯ ದೈಹಿಕ ಶಿಕ್ಷಕರಾದ ಶ್ರೀಯುತ ಮಹದೇವ್‍ರವರು ಕೋಟಿಕಂಠ ಗೀತ ಗಾಯನದ ಸಂಕಲ್ಪ ವಿಧಿಯನ್ನು ಎಲ್ಲರಿಗೂ ಉಚ್ಛರಿಸಿದರು. ಕೊನೆಯದಾಗಿ ಪ್ರಾಥಮಿಕ ಶಾಲಾ ಆಂಗ್ಲಮಾಧ್ಯಮದ ಹಿಂದಿ ಶಿಕ್ಷಕರಾದ ಶ್ರೀಯುತ ಮಂಜುನಾಥ್‍ರವರು ಸರ್ವರಿಗೂ ವಂದಿಸಿದರು.

ಹೀಗೆ ಕನ್ನಡ ಭಾಷೆಯ ಅಭಿಮಾನವನ್ನು ಕೋಟಿಕಂಠ ಗೀತ ಗಾಯನ ಕಾರ್ಯಕ್ರಮದ ಮೂಲಕ ನಮ್ಮ ಶಾಲೆಗಳಲ್ಲಿ ಸಂಭ್ರಮಿಸಲಾಯಿತು.

 

 

 

 

 

 

ಶ್ರೀಮತಿ ರೇಣುಕಾ, ಶಿಕ್ಷಕಿ
ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆ, ಕೆ.ಆರ್ ನಗರ.

 

 

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]