Print

ಬೆಥನಿ ಪ್ರೌಢ ಶಾಲೆ ಮತ್ತು ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಗಳು ಜಂಟಿಯಾಗಿ 67ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸರಿಸಿದರು. ಕಾರ್ಯಕ್ರಮವನ್ನು ಮೊಟ್ಟಮೊದಲಿಗೆ ಮಕ್ಕಳ ಪ್ರಾರ್ಥನೆಯ ಮೂಲಕ ಪ್ರಾರಂಭವಾಗಿ ಸಮಾರಂಭಕ್ಕೆ ನೆರೆದಿರುವಂತಹ ಸರ್ವ ಅತಿಥಿ ಗಣ್ಯರಿಗೂ ಶ್ರೀ ದೇವಪ್ಪರವರು ಸ್ವಾಗತ ಭಾಷಣ ಮತ್ತು ಮಾಲಾರ್ಪಣೆಯೊಂದಿಗೆ ಸ್ವಾಗತಿಸಿದರು. ಮುಖ್ಯ ಅತಿಥಿಗಳು ಶಿಶುವಿಹಾರ ಶಾಲೆಯ ಪಾಲಕ-ಪೋಷಕ ಸಂಘದ ಉಪಾಧ್ಯಕ್ಷರು ಶ್ರೀ ರುದ್ರಪ್ಪರವರು ನಾಡದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಾ ಅತಿಥಿಗಳಾದ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಬೆಥನಿ ಪ್ರೌಢ ಶಾಲೆಯ ಪಾಲಕ-ಪೋಷಕ ಸಂಘದ ಉಪಾಧ್ಯಕ್ಷರಾದ ಶ್ರೀ ಶರಣಗೌಡ ಪಾಟೀಲರವರು ಧ್ವಜಾರೋಹಣವನ್ನು ನೆರವೇರಿಸಿದರು.

ಮುಖ್ಯ ಅತಿಥಿಗಳಾದ ಶ್ರೀ ರುದ್ರಪ್ಪ ಸರ್‍ರವರು ಕನ್ನಡ ನಾಡಿನ ಏಕೀಕರಣದ ಕುರಿತು ವಿವರಣೆಯನ್ನು ನೀಡಿದರು. ಪ್ರೌಢ ಶಾಲೆಯ ವಿದ್ಯಾರ್ಥಿನಿಯಾದ ಕುಮಾರಿ ಪ್ರಿಯದರ್ಶಿನಿ ಕನ್ನಡ ನಾಡಿನ ಇತಿಹಾಸ ಮತ್ತು ಐಸಿರಿಯ ಬಗ್ಗೆ ವಿವರಣೆಯನ್ನು ನೀಡಿದಳು. ಪ್ರೌಢ ಶಾಲೆಯ ಮಕ್ಕಳು “ಹಚ್ಚೇವು ಕನ್ನಡದ ದೀಪ” ಎನ್ನುವ ಹಾಡಿಗೆ ನೃತ್ಯವನ್ನು ಮಾಡಿದರು.

ಶ್ರೀ ಶರಣಗೌಡ ಪಾಟೀಲರವರು ಸಾಧಕನಿಗೆ ಸಾಧನೆಯೇ ಶ್ರೇಯಸ್ಸು, ಕನ್ನಡವನ್ನೇ ನಮ್ಮ ಉಸಿರಾಗಿಸಿಕೊಳ್ಳೊಣ ಹೀಗೆ ಬೆಥನಿ ಪ್ರೌಢ ಶಾಲೆಯ ಕೀರ್ತಿಯನ್ನು ಎತ್ತಿ ಹಿಡಿಯೋಣ ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು. ಕಾರ್ಯಕ್ರಮವನ್ನು ಶ್ರೀಮತಿ ರಶ್ಮೀ ಅವರ ವಂದನಾರ್ಪಣೆಯೊಂದಿಗೆ ಮುಕ್ತಾಯಗೊಳಿಸಲಾಯಿತು.

 

 

 

 

 

 

 

 

ಶ್ರೀಮತಿ ಸುಷ್ಮಾ, ಸಹ ಶಿಕ್ಷಕಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ