Nov 05: ಅಕ್ಟೋಬರ್ 31ರಂದು ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಉಕ್ಕಿನ ಮನುಷ್ಯ ಸರ್ದಾರ ವಲ್ಲಾಭಾಯಿ ಪಟೇಲರವರ ಜನ್ಮದಿನವನ್ನು “ರಾಷ್ಟ್ರೀಯ ಏಕತಾ ದಿನ” ಎಂದು ದೇಶದಲ್ಲೆಡೆ ಆಚರಿಸುವಂತೆ ನಮ್ಮ ಶಾಲೆಯಲ್ಲಿ, ಬೆಥನಿ ಪ್ರೌಢ ಶಾಲೆ ಮತ್ತು ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಗಳು ಜಂಟಿಯಾಗಿ ಆಚರಿಸಿದವು. ಕಾರ್ಯಕ್ರಮವನ್ನು ಶ್ರೀಮತಿ ಸುಷ್ಮಾರವರ ಪ್ರಾಸ್ತಾವಿಕ ನುಡಿಗಳೊಂದಿಗೆ ಪ್ರಾರಂಭಗೊಳಿಸಲಾಯಿತು. ಬೆಥನಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯನಿಯರಾದ ಸಿ.ಕವಿತಾ ಹಾಗೂ ಪ್ರಭಾರಿ ಮುಖ್ಯಗುರುಗಳಾದ ಶ್ರೀ ಶಿವಕಾಂತ ಸರ್‍ರವರು ಸರ್ದಾರ ವಲ್ಲಾಭಾಯಿ ಪಟೇಲರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಕು.ಅವಿನಾಶ ವಲ್ಲಾಭಾಯಿ ಪಟೇಲರ ಜೀವನ ಚರಿತ್ರೆಯ ಬಗ್ಗೆ ಭಾಷಣ ನೀಡಿದನು. ಶ್ರೀಯುತ ವಿಶ್ವನಾಥ ಕುಂಬಾರ ಸರ್‍ರವರು ಎಲ್ಲಾ ಮಕ್ಕಳಿಗೂ ಏಕತಾ ಪ್ರತಿಜ್ಞೆಯನ್ನು ನೆರವೇರಿಸಿದರು. ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಏಕತಾ ಓಟ, ಸೈಕಲ್ ರೈಡಿಂಗ್ ಮತ್ತು ಪ್ರಬಂಧ ಲೇಖನ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ವಂದನಾರ್ಪಣೆಯೊಂದಿಗೆ ಮುಕ್ತಾಯಗೊಳಿಸಲಾಯಿತು.

 

 

 

 

 

 

ಶ್ರೀಯುತ ಮಲ್ಲಿಕಾರ್ಜುನ ರಾವೂರ, ಸಹ ಶಿಕ್ಷಕರು
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]