Nov 07: ನವ್ಹಂಬರ್ 1 ರಂದು “ಕರ್ನಾಟಕ ರಾಜ್ಯೋತ್ಸವ” ಸಂಭ್ರಮದ ಆಚರಣೆಯಲ್ಲಿ‘ಜನಪದ ಕಲೆಗಳ ವೈಭವ’ ಹಾಗೂ ‘ನಮ್ಮ ನಾಡು ನಮ್ಮ ಹೆಮ್ಮೆ’ ಎಂಬ ಶಿರ್ಷಿಕೆಯಲ್ಲಿ ನಮ್ಮ ಶಾಲೆಯ ರೂಪಕ ಪ್ರದರ್ಶನವು ಗದಗ ನಗರದ ಪ್ರೇಕ್ಷಕರ ಮೆಚ್ಛುಗೆಗೆ ಪಾತ್ರವಾಗಿದ್ದು ಶ್ಲಾಘನೀಯ. ಎಲ್ಲಾ ಕಾರ್ಯಕ್ರಮಗಳ ನೇತೃತ್ವ ವಹಿಸಿ, ಕಾರ್ಯಕ್ರಮದ ಅಧ್ಯಕ್ಷರಾಗಿ, ಶಿಕ್ಷಕರಿಗೆ ಪ್ರೋತ್ಸಾಹಿಸಿ, ಮಕ್ಕಳಿಗೆ ಮಾರ್ಗದರ್ಶನ ನೀಡಿದ ಲೊಯೊಲಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿಯರಾದ ಸಿಸ್ಟರ್ ರೆನಿಟಾ ಪಿಂಟೊ ರವರ ಕಾರ್ಯವೈಖರಿಗೆ ಈ ವೃಭವದ ಕಾರ್ಯಕ್ರಮಗಳೆ ಸಾಕ್ಷಿಯಾಗಿವೆ. ಮುಖ್ಯೋಪಾಧ್ಯಾಯನಿಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಎಲ್ಲರೂ ಸೇರಿ ಬೆಥನಿ ಕುಟುಂಬದ ಸದಸ್ಯರಾಗಿ, ಒಂದೇ ಗೂಡಿನ ಹಕ್ಕಿಗಳಂತೆ ಅತ್ಯಂತ ಹರ್ಷದಿಂದ, ಅಭಿಮಾನದಿಂದ ಆಚರಿಸಿದ ಉಲ್ಲಾಸದ ಕ್ಷಣಗಳಿವು.

ಅಬ್ದುಲ್‍ವಹಾಬ್ ಆರ್ ಮಲ್ಲನಕೇರಿ, ಸಹ ಶಿಕ್ಷಕರು
ಲೊಯೊಲಾ ಪ್ರೌಢ ಶಾಲೆ, ಗದಗ-ಬೆಟಗೇರಿ