Dec 05: ದಿನಾಂಕ 21.11.2022 ರಂದು ತಾಲೂಕಾ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಚಿತ್ತಾಪೂರ ಮತ್ತು ಬೆಥನಿ ಪ್ರೌಢ ಶಾಲೆಯ ಸಂಯುಕ್ತಾಶ್ರಯದಲ್ಲಿ “ಸಂವಿಧಾನ ದಿನ” ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷರಾಗಿ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಕವಿತಾರವರು, ಉದ್ಘಾಟಕರಾಗಿ ಶ್ರೀ ಕರಣ ಗುಜ್ಜರವರು (4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಕಲಬುರಗಿ), ಮುಖ್ಯ ಅತಿಥಿಗಳಾಗಿ ಶ್ರೀ ಸಂತೋಷ ಎಸ್ ಪಲ್ಯದರವರು (ಹಿರಿಯ ಸಿವಿಲ್ ನ್ಯಾಯಾಧೀಶರು), ಶ್ರೀ ಸಂತೋಷಕುಮಾರ ದೈವಜ್ಞ (ಸಿವಿಲ್ ನ್ಯಾಯಾಧೀಶರು), ಶ್ರೀಮತಿ ಅಂಜನಾದೇವಿ ಆರ್, ಶ್ರೀ ಗಂಗಾಧರ ಸಾಲಿಮಠ, ಶ್ರೀ ಶರಣಗೌಡ ಎನ್ ಪಾಟೀಲರವರು ಉಪನ್ಯಾಸಕರಾಗಿ ಶ್ರೀ ಮಲ್ಲಿಕಾರ್ಜುನ ಹೊನಗುಂಟ (ನ್ಯಾಯವಾದಿಗಳು ಚಿತ್ತಾಪೂರ) ಇವರುಗಳು ಆಗಮಿಸಿದ್ದರು.

ಕಾರ್ಯಕ್ರಮವು ಪ್ರಾರ್ಥನಾ ನೃತ್ಯದೊಂದಿಗೆ ಆರಂಭವಾಯಿತು. ಶ್ರೀ ದೇವಪ್ಪರವರ ಸ್ವಾಗತ ನುಡಿಗಳಿಂದ ಮಾಲಾರ್ಪಣೆಯೊಂದಿಗೆ ನೆರೆದಿರುವ ಗಣ್ಯರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ವೇದಿಕೆ ಮೇಲಿನ ಗಣ್ಯರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆಯನ್ನು ನೀಡಿದರು. ನಂತರ ಶ್ರೀ ಸಂತೋಷಕುಮಾರ ದೈವಜ್ಞರವರು ಸಂವಿಧಾನದ ಪೂರ್ವ ಪೀಠಿಕೆಯ ಪ್ರತಿಜ್ಞಾ ವಿಧಿಯನ್ನು ನೆರೆವೇರಿಸಿದರು.

ಶ್ರೀ ಕರಣ ಗುಜ್ಜರ (4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಕಲಬುರಗಿ) ಇವರು ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು. ನಂತರ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಗಣ್ಯರಿಂದ ಬಹುಮಾನ ವಿತರಿಸಲಾಯಿತು. ಶ್ರೀ ಮಲ್ಲಿಕಾರ್ಜುನ ಹೊನಗುಂಟಿ, ಶ್ರೀ ಸಂತೋಷ ಎಸ್ ಪಲ್ಲೇದ, ಶ್ರೀ ಗಂಗಾಧರ ಸಾಲಿಮಠರವರು ಸಂವಿಧಾನದ ಪೂರ್ವಪೀಠಿಕೆ, ಕಾನೂನಿನ ಬಗ್ಗೆ ಜಾಗೃತಿ ನುಡಿಗಳನ್ನು ನುಡಿದರು ನಮ್ಮ ಶಾಲೆಯ ಶಿಸ್ತು, ಮಕ್ಕಳ ಅಚ್ಚುಕಟ್ಟಾದ ಶಿಸ್ತಿನ ವರ್ತನೆಯ ಬಗ್ಗೆ ಪ್ರಶಂಸಿದರು. ನಂತರ ಭಗಿನಿ ಕವಿತಾರವರು ತಮ್ಮ ಅಧ್ಯಕ್ಷೀಯ ಭಾಷಣವನ್ನು ನೆರವೇರಿಸಿದರು. ಅಂತಿಮವಾಗಿ ಕಾರ್ಯಕ್ರಮವು ಶ್ರೀ ವಿಶ್ವನಾಥರವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.

 

 

 

 

 

 

 

 

 

 

ಭಗಿನಿ ಕವಿತಾ ಬಿ.ಎಸ್, ಮುಖ್ಯೋಪಾಧ್ಯಾಯರು
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ