ಕ್ರಿಸ್‍ಮಸ್ ಎಂದರೆ ಸಡಗರ, ಸಂಭ್ರಮ, ನಗು, ನಲಿವು ಎಲ್ಲವೂ ಅಂತಹ ಕ್ರಿಸ್ಮಸ್ ಹಬ್ಬವನ್ನು ಬೆಥನಿ ಪ್ರೌಢ ಶಾಲೆ ಮತ್ತು ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಗಳು ಜಂಟಿಯಾಗಿ ದಿನಾಂಕ 23.12.22ರಂದು ಆಚರಿಸಿದವು.

ಅಧ್ಯಕ್ಷರು ಸಿಸ್ಟರ್ ಲೂಸಿ ಪ್ರೀಯಾ, ಮುಖ್ಯ ಅತಿಥಿಗಳಾಗಿ ಫಾದರ್ ಫೆಡ್ರಿಕ್ ಡಿಸೋಜ್, ಮೌಲ್ವಿ ಇಮಾಮ ಯಾಸೀನ ಮಹ್ಮದ, ಅತಿಥಿಗಳ ಸ್ಥಾನವನ್ನು ಸಿಸ್ಟರ್ ಸಿಂಥಿಯಾ ಸಿಕ್ವೇರಾ, ಸಿಸ್ಟರ್ ಮರಿಯಾ, ಸಿಸ್ಟರ್ ಪ್ರೇಸಿಲ್ಲಾ, ಸಿಸ್ಟರ್ ಸ್ಯಾಂಡ್ರಾ, ಸಿಸ್ಟರ್ ಕವಿತಾ, ಸಿಸ್ಟರ್ ಮ್ಯಾಗ್ದಲಿನ್, ಸಿಸ್ಟರ್ ಅನಿತಾ ಶಾಂತಿ, ಸಿಸ್ಟರ್ ಅವೆಲಿನ್, ಶ್ರೀ ಶಿವಕಾಂತರವರು ಆಗಮಿಸಿದ್ದರು. ಕಾರ್ಯಕ್ರಮವು ಮಕ್ಕಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಮೊಟ್ಟ ಮೊದಲಿಗೆ ಖ.ಈ.ಅ ಮಸ್ಕರೇನಸ್‍ರವರು ದೈವಾಧೀನರಾದ ದಿನವನ್ನು ಸ್ಮರಿಸಿ ಅವರ ಭಾವಪುತ್ತಳಿಗೆ ಮಾಲಾರ್ಪಣೆ ಮಾಡಲಾಯಿತು. ಬೆಥನಿ ಪ್ರೌಢ ಶಾಲೆಯ ಮಕ್ಕಳ ಸ್ವಾಗತ ನೃತ್ಯದೊಂದಿಗೆ ಅತಿಥಿಗಳನ್ನು ಸ್ವಾಗತಿಸಿ, ಶ್ರೀ ವಿಶ್ವರಾಜ್ ರವರು ಸ್ವಾಗತ ಭಾಷಣದೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ನಂತರ ಜ್ಯೋತಿ ಬೆಳಗಿಸುವ ಕಾರ್ಯಕ್ರಮ ನೆರವೇರಿಸಲಾಯಿತು. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕೇಕ್ ಕಟ್ ಮಾಡಿ ಸಿಹಿ ಹಂಚಲಾಯಿತು.

ಪೂಜ್ಯ ಫಾದರ ಫೆಡ್ರಿಕ್ ಡಿಸೋಜಾರವರು ಧರ್ಮದ ಮೂಲ ಉದ್ದೇಶವೇ ಶಾಂತಿ ಸ್ಥಾಪನೆ ಎನ್ನುವಂತಹ ಹಿತನುಡಿಗಳನ್ನು ಹೇಳಿದರು. ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಯೇಸುವಿನ ಜನನದ ಸಂದೇಶವುಳ್ಳ ಹಾಡುಗಳನ್ನೊಳಗೊಂಡ ನೃತ್ಯ ರೂಪಕ ನಾಟಕ ಹಾಗೂ ನೃತ್ಯಗಳನ್ನು ಪ್ರದರ್ಶಿಸಿದರು.

ಸಿಸ್ಟರ್ ಲೂಸಿ ಪ್ರೀಯಾರವರು ಅಧ್ಯಕ್ಷೀಯ ಭಾಷಣದೊಂದಿಗೆ ಕ್ರಿಸ್ಮಸ್ ಸಂದೇಶವನ್ನು ಸಾರುತ್ತಾ ಶುಭಾಶಯಗಳನ್ನು ಕೋರಿದರು. ಕಾರ್ಯಕ್ರಮವು ಶ್ರೀ ವಿಶ್ವನಾಥ ಕುಂಬಾರರವರ ವಂದನಾರ್ಪಣೆಯೊಂದಿಗೆ ಸಮಾಪ್ತಿಯಾಯಿತು.

  

 

 

 

 

 

 

 

 

ಸಿಸ್ಟರ್ ಕವಿತಾ, ಮುಖ್ಯೋಪಾಧ್ಯಾಯಿನಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ