Print

March 10: ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಕೌಟ್, ಗೈಡ್, ಕಬ್ ಮತ್ತು ಬುಲ್ ಬುಲ್ ವಾರ್ಷಿಕ ಮೇಳವು ಫೆಬ್ರವರಿ 16 ಮತ್ತು 17 ರಂದು ನೆರವೇರಿತು. ಧ್ವಜ ವಂದನೆ ಮತ್ತು ಉದ್ಘಾಟನಾ ಸಮಾರಂಭದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅಧ್ಯಕ್ಷತೆಯನ್ನು ವಂದನೀಯ ಭಗಿನಿ ಪ್ರಶಾಂತಿ ಬಿ ಎಸ್‍ರವರು ವಹಿಸಿದರು. ಶ್ರೀಯುತ ಗಿರೀಶ್ ನಂದನ್ ಎಂ ಕೆ .ಎ .ಎಸ್ ಸಹಾಯಕ ಆಯುಕ್ತರು ಪುತ್ತೂರು ಉಪ ವಿಭಾಗ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಸಲಾಯಿತು. ಬಳಿಕ ಮಕ್ಕಳಿಂದ ಕಸದಿಂದ ರಸ, ವಿಶ್ವ ಸ್ಕೌಟ್ ಧ್ವಜ, ಗೂಡು ದೀಪ ರಚನೆ, ವಿಶ್ವ ಗೈಡ್ ಧ್ವಜ, ಕಸದಿಂದ ರಸ, ರಂಗೋಲಿ, ಗಾಳಿಪಟ ರಚನೆ, ಗೊಂಬೆ ತಯಾರಿ, ಕಸದಿಂದ ರಸ. ಗೊಂಬೆ ತಯಾರಿ, ಎಲೆಗಳಿಂದ ಆಕೃತಿ ತಯಾರಿ, ಕಸದಿಂದ ರಸ ಚಟುವಟಿಕೆಗಳನ್ನು ನಡೆಸಲಾಯಿತು. ಮಧ್ಯಾಹ್ನದ ಬಳಿಕ 20 ತಂಡಗಳಿಂದ ಬೆಂಕಿ ಬಳಸದೆ ಅಡುಗೆ ತಯಾರಿಸಿದರು. ನಂತರ ಪುತ್ತೂರು ಕ್ಯಾಂಪೆÇ್ಕ ಚಾಕಲೇಟ್ ಫ್ಯಾಕ್ಟರಿ ಗೆ ಹೊರ ಸಂಚಾರಕ್ಕೆ ತೆರಳಲಾಯಿತು. ಸಂಜೆಯ ಅವಧಿಯಲ್ಲಿ ದರ್ಬೆ ಮೂಲಕ ಸ್ಕೌಟ್ ಗೈಡಿನ ಬ್ಯಾಂಡ್ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನೆರವೇರಿತು. ಸಂಜೆ ಮಕ್ಕಳಿಂದ ಕರೋಕೆ ಹಾಡುಗಳ ರಸಮಂಜರಿ, ಕಾರ್ಯಕ್ರಮಕ್ಕೆ ಮೆರುಗು ನೀಡಿತು. ರಾತ್ರಿ ಭೋಜನದ ನಂತರ ನಡೆದ ಆಕರ್ಷಕ ಶಿಭಿರಾಗ್ನಿ ಕಾರ್ಯಕ್ರಮ ಪ್ರೇಕ್ಷಕರ ಮನಸೆಳೆಯಿತು. ಬಳಿಕ ಸ್ಕೌಟ್, ಗೈಡ್, ಕಬ್, ಬುಲ್ ಬುಲ್ ವಿದ್ಯಾರ್ಥಿಗಳಿಂದ ಸಾಂಸ್ಕತಿಕ ಕಾರ್ಯಕ್ರಮ ಪ್ರಸ್ತುತಗೊಂಡಿತು.

ದಿನಾಂಕ 17.02.2023 ಶುಕ್ರವಾರದಂದು ಬೆಳಗ್ಗೆ ಬಿ. ಪಿ. ಸಿಕ್ಸ್ ವ್ಯಾಯಾಮ, ಸರ್ವಧರ್ಮ ಪ್ರಾರ್ಥನೆ, ಕಿಮ್ಸ್ ಗೇಮ್, ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಚರಣ್ ಕುಮಾರ್ ಶಿಕ್ಷಕರು ಸ.ಹಿ.ಪ್ರಾ.ಶಾಲೆ ಮುಕ್ವೆ ರವರಿಂದ ಕ್ರಾಫ್ಟ್ ತಯಾರಿ ತರಬೇತಿ ನಡೆಯಿತು. ಬಳಿಕ ಶಾಲಾ ಮುಖ್ಯಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಸ್ಕೌಟ್, ಗೈಡ್, ಕಬ್, ಬುಲ್ ಬುಲ್ ಮೇಳದ ಸಮಾಪ್ತಿ ಧ್ವಜಾವರೋಹಣದೊಂದಿಗೆ ಮುಕ್ತಾಯವಾಯಿತು.

ಬಾಲಕೃಷ್ಣ ರೈ ಪೆÇರ್ದಾಲ್, ಸ್ಕೌಟ್ ಶಿಕ್ಷಕ
ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ, ಪುತ್ತೂರು