June 12: ಜೀವನ ಅನ್ನೋದು ಕೂಡುವಿಕೆ ಮತ್ತು ಅಗಲುವಿಕೆಯ ಆಟವಾಗಿದೆ. ಕೂಡುವವನಿಗೆ ಹೊಸ ಸ್ಥಳ, ಹೊಸ ಜನರ ಬಗ್ಗೆ ಕೂತೂಹಲವಿದ್ದರೆ, ಅಗಲುವವನಿಗೆ ಪ್ರೀತಿ, ಪ್ರೇಮಗಳಿಂದ ಸಮ್ಮಿಳಿತಗೊಂಡಿರುವವರನ್ನು ಬಿಟ್ಟು ಹೋಗುವ ದುಃಖವಿರುತ್ತದೆ ಹಾಗೆಯೇ ಈ 2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಿಶುವಿಹಾರ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿ ಭಗಿನಿ ಅವೆಲಿನ್‍ರವರನ್ನು ನಾವು ಬಿಳ್ಕೋಡುತ್ತಿದ್ದೇವೆ ಹಾಗೂ ನೂತನ ಮುಖ್ಯೋಪಾಧ್ಯಾಯಿನಿ ಭಗಿನಿ ಸಿಂಪ್ರೋಜ್ ಬಿ ಎಸ್ ಅವರನ್ನು ನಮ್ಮ ಶಿಶುವಿಹಾರ ಶಾಲೆಗೆ ಬರಮಾಡಿಕೊಳ್ಳುತ್ತಿದ್ದೇವೆ. ಈ ಸಂದರ್ಭದಲ್ಲಿ ಬೆಥನಿ ಸಂಸ್ಥೆಯ ಸಹಾಯಕ ಹಿರಿಯ ಪ್ರಾಂತ್ಯಾಧಿಕಾರಿನಿಗಳಾದ ವಂದನೀಯ ಭಗಿನಿ ರೋಜ್ ಆನ್ನ್ ಬೆಥನಿ ವಿದ್ಯಾಸಂಸ್ಥೆಯ ಉಪಸಮಿತಿ ಸದಸ್ಯರು ಹಾಗೂ ಸಲಹೆಗಾರರಾದ ವಂದನೀಯ ಭಗಿನಿ ವೆರೊನಿಟಾ ಅವರು ಅಧಿಕಾರ ವರ್ಗಾವಣೆಗೆ ಸಾಕ್ಷಿದಾರರಾಗಿ ನಮ್ಮ ಶಾಲೆಗೆ ಆಗಮಿಸಿರುವುದು ನಮಗೆ ಹರ್ಷೋಲ್ಲಾಸ ತಂದಿದೆ.

ನೂತನ ಮುಖ್ಯೋಪಾಧ್ಯಾಯಿನಿ ಭಗಿನಿ ಸಿಂಪ್ರೋಜ್ ಬಿ ಎಸ್ ಅವರನ್ನು ಶಿಶುವಿಹಾರ ಶಾಲೆ ಹಾಗೂ ಬೆಥನಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿಯರು ಹಾಗೂ ಶಿಕ್ಷಕ ವೃಂದದವರು ಸ್ವಾಗತಿಸಿದರು. ಭಗಿನಿ ರೋಜ್ ಆನ್ನ್ ಮತ್ತು ಭಗಿನಿ ವೆರೋನಿಟಾರವರು ಭಗಿನಿ ಅವೆಲಿನ್ ಮತ್ತು ಭಗಿನಿ ಸಿಂಪ್ರೋಜ್ ಅವರ ಗುಣ, ಸ್ವಭಾವ, ಛಲ, ನಿಸ್ವಾರ್ಥ ಸೇವೆ, ಅವರಲ್ಲಿರುವ ಪ್ರೀತಿ, ಕಾಳಜಿ, ಮಾನವೀಯತೆ ಮುಂತಾದವುಗಳನ್ನು ಅವರವರ ಶೈಲಿಗಳಲ್ಲಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳೆದುರು ಶ್ಲಾಘಿಸುತ್ತ ಅವರೀರ್ವರ ಮುಂದಿನ ಕಾರ್ಯಗಳಿಗೆ ಶುಭಾಶಯಗಳನ್ನು ಕೋರುತ್ತ ಅಭಿನಂದನೆಗಳನ್ನು ಸಲ್ಲಿಸಿದರು.

 

 

 

 

ಭಗಿನಿ ಕವಿತಾ ಬಿಎಸ್, ಮುಖ್ಯೋಪಾಧ್ಯಾಯರು
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

 

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]