July 19: ಮಾನವನ ಸರ್ವತೋಮುಖ ಬೆಳವಣಿಗೆಯ ಮಹಾ ಉದ್ಧೇಶವನ್ನು ಇಟ್ಟುಕೊಂಡು ಸ್ಥಾಪನೆಯಾದ ಬೆಥನಿ ಸಂಸ್ಥೆಯು 2023 ಜುಲೈ 16ಕ್ಕೆ 102 ವರ್ಷ ತುಂಬಿದ ಸಂಭ್ರಮದ ಹರುಷದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ.

102ನೇ ವರ್ಷದ ಬೆಥನಿ ಸಂಸ್ಥಾಪನಾ ದಿನಾಚರಣೆಯನ್ನು ನಮ್ಮ ಶಾಲೆಯಲ್ಲಿ ದಿನಾಂಕ 15.07.2023ರ ಶನಿವಾರದಂದು ಬೆಳಿಗ್ಗೆ 8.00 ಗಂಟೆಗೆ ಆಚರಿಸಲಾಯಿತು. ಇದರಲ್ಲಿ ಶಿಶುವಿಹಾರ ಶಾಲೆ, ಬೆಥನಿ ಪ್ರೌಢ ಶಾಲೆ, ಜ್ಯೋತಿ ಸೇವಾ ಕೇಂದ್ರ ಮತ್ತು ಇಂಡೋ ಜರ್ಮನ ಆಸ್ಪತ್ರೆಯಲ್ಲಿ ತಮ್ಮ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ತ್ಯಾಗದ ಪ್ರತೀಕವಾಗಿರುವ ಎಲ್ಲ ಭಗಿನಿಯರೊಂದಿಗೆ ಈ ನಾಲ್ಕು ಶಾಖೆಗಳ ಸಿಬ್ಬಂದಿವರ್ಗದವರೂ ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದದ್ದು ಒಂದು ವಿಶೇಷವೇ ಸರಿ.

ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಫಾದರ ರೇಮಂಡ್ ಮಸ್ಕರೇನ್ಹಸ್‍ರವರ ಭಾವಚಿತ್ರಕ್ಕೆ ಹಾಗೂ ಅವರ ಭಾವಪುತ್ಹಳಿಗೆ ಸಂಸ್ಥೆಯಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬರು ಹೂಮಾಲೆ ಹಾಕುವುದರೊಂದಿಗೆ ಪುಷ್ಪಗಳನ್ನು ಸಮರ್ಪಿಸಿ ವಂದನೆಗಳನ್ನು ಸಲ್ಲಿಸಲಾಯಿತು. ಜೊತೆಗೆ ಅವರ ಮಹಾತ್ಕಾರ್ಯಗಳನ್ನು ಒಳಗೊಂಡ ನೃತ್ಯ ರೂಪಕವನ್ನು ಮಕ್ಕಳ ವೇಷಭೂಷಣಗಳೊಂದಿಗೆ ವಿಜೃಂಭಣೆಯಿಂದ ಪ್ರದರ್ಶಿಸಲಾಯಿತು. ಅಲ್ಲದೆ ಬೆಥನಿ ಸಂಸ್ಥೆಯ ಮೌಲ್ಯಗಳನ್ನು ಸಾರುವ ಒಂದು ನೃತ್ಯವೂ ಕೂಡ ಕಾರ್ಯಕ್ರಮಕ್ಕೆ ಶೋಭೆಯನ್ನು ತಂದಿತು.

ನಂತರ ಸಿಸ್ಟರ್ ಡೆಸಿಯವರು ಕಾರ್ಯಕ್ರಮದಲ್ಲಿ ವಂದನಾರ್ಪಣೆ ಮಾಡುವುದರ ಮೂಲಕ ಎಲ್ಲ ಸಿಬ್ಬಂದಿ ವರ್ಗದವರಿಗೂ ಅಭಿನಂದನೆಗಳ ಜೊತೆಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

 

 

 

 

 

 

 

 

 

 

 

 

ಶ್ರೀಯುತ ದೇವಪ್ಪ, ಸಹ ಶಿಕ್ಷಕರು
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]