Sep 22: “ಹೆಣ್ಣು ಸಮಾಜದ ಕಣ್ಣು”, “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಎಂಬ ನಾಣ್ಣುಡಿಗಳಂತೆ ನಮ್ಮ ಶಾಲೆಯಲ್ಲಿ ಪ್ರತಿ ವರ್ಷವೂ ಮಾತೆ ಮರಿಯಮ್ಮನವರ ಹುಟ್ಟು ಹಬ್ಬವಾದ ಸೆಪ್ಟೆಂಬರ 8 ನ್ನು ಹೆಣ್ಣು ಮಗುವಿನ ದಿನಾಚರಣೆಯಾಗಿ ಆಚರಿಸುತ್ತೇವೆ. ಅದರಂತೆ ಸೆಪ್ಟೆಂಬರ 8, 2023ರ ಶುಕ್ರವಾರದಂದು ಬೆಳಿಗ್ಗೆ ಹೆಣ್ಣು ಮಗುವಿನ ಪ್ರಾಶಸ್ತ್ಯವನ್ನು ಕುರಿತು ಒಂದು ನಾಟಕ ಮಕ್ಕಳಿಂದ ಅರ್ಥಪೂರ್ಣವಾಗಿ ಪ್ರದರ್ಶಿಸಲಾಯಿತು. ನಾಟಕದಲ್ಲಿ ಹೆಣ್ಣು ಮಗುವಿನ ಅನೇಕ ಘೋಷಣೆಗಳನ್ನು ಹೇಳುವುದರ ಮೂಲಕ ಹೆಣ್ಣು ಮಕ್ಕಳ ಸಾಕ್ಷರತೆಯ ಪ್ರಾಮುಖ್ಯತೆಯನ್ನು ತಿಳಿಸಿಕೊಡಲಾಯಿತು. ಜೊತೆಗೆ ತೊಟ್ಟಿಲು ತೂಗುವ ಕೈ ದೇಶವನ್ನೇ ಆಳಬಲ್ಲುದು ಎಂಬ ವಿಷಯವನ್ನು ಕಾರ್ಯಕ್ರಮದಲ್ಲಿ ನೆರೆದವರಲ್ಲಿ ಮನದಟ್ಟು ಮಾಡಲಾಯಿತು.

ಶ್ರೀಮತಿ ಸುಷ್ಮಾ, ಸಹ ಶಿಕ್ಷಕಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

 

 

 

 

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]