Nov 21 : ಲಿಟ್ಲ್ ಫ್ಲವರ್ ವಿದ್ಯಾ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟವು ದಿನಾಂಕ 17.11.2023 ರಂದು ಕ್ರೀಡಾಂಗಣದಲ್ಲಿ ಅತ್ಯಂತ ವಿಜ್ರಂಭಣೆಯಿಂದ ನೆರವೇರಿತು.

ವಂ. ಭಗಿನಿ ಪ್ರೇಮಲತಾ ಬಿಎಸ್ ಇವರ ಘನ ಅಧ್ಯಕ್ಷತೆಯಲ್ಲಿ ವಾದ್ಯದೊಂದಿಗೆ, ಮುಖ್ಯ ಅತಿಥಿ, ಮುಲ್ಕಿ ಪೆÇಲೀಸ್ ಠಾಣೆಯ ಸಭ್ ಇನ್ಸ್ಪೆಕ್ಟರ್ ಶ್ರೀ ಮಾರುತಿ ಪಿ, ಹಾಗೂ ಶ್ರೀ ಸುರೇಂದ್ರ ಪೂಜಾರಿ ಕಾನ್ಸ್ಟೇಬಲ್ ಇವರು ಪಥ ಸಂಚಲನ ತಂಡಗಳ ನಾಯಕರಿಂದ ಗೌರವವನ್ನು ಸ್ವೀಕರಿಸಿದರು, ಸ್ಥಳೀಯ ಉದ್ಯಮಿ ಶ್ರೀ ಡಾಲ್ಫಿ ಸಾಂತಮಯೂರ್, ಹಾಗೂ ಶ್ರೀ ಸ್ಟ್ಯಾನಿ ಪಿಂಟೊ, ಇವರಿಂದ ಪಾರಿವಾಳಗಳನ್ನು ಹಾರಿಸುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಬ್ ಇನ್ಸ್ಪೆಕ್ಟರ್ ಶ್ರೀ ಮಾರುತಿ ಪಿ ಸಬ್ ಇನ್ಸ್ಪೆಕ್ಟರ್ ಇವರು ವಿದ್ಯಾರ್ಥಿಗಳ ಶಿಸ್ತುಬದ್ಧ ಪಥಸಂಚಲನವನ್ನು ಶ್ಲಾಘಿಸುತ್ತಾ ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ ಎಂದು ಕ್ರೀಡೆಗೆ ಶುಭ ಹಾರೈಸಿದರು.

ಸುಮಾರು 4 ಗಂಟೆಯ ತನಕ ನಡೆದ ಈ ಕ್ರೀಡಾಕೂಟದಲ್ಲಿ ಅನೇಕ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನಗಳಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ವಂ. ಭಗಿನಿ ಲಿಸಾ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ವಂ ಭ. ಮೋನಿಕಾ, ಪ್ರೌಢಶಾಲಾ ಶಿಕ್ಷಕರ ರಕ್ಷಕ ಸಂಘದ ಉಪಾಧ್ಯಕ್ಷರು ಶ್ರೀಮತಿ ಜೆಸಿಂತಾ ಡೇಸ, ಶಾಲಾ ದೈಹಿಕ ಶಿಕ್ಷಕರಾದ ಶ್ರೀಮತಿ ವಿದ್ಯಾಶ್ರೀ ರವರ ಮಾರ್ಗದರ್ಶನದಲ್ಲಿ ಕ್ರೀಡಾಕೂಟವು ಸಾಂಗವಾಗಿ ನೆರವೇರಿತು.

 

 

 

 

 

 

 

 

 

ವಂ. ಭಗಿನಿ ಲಿಸಾ, ಮುಖ್ಯೋಪಾಧ್ಯಾಯನಿ
ಲಿಟ್ಲ್ ಫ್ಲವರ್ ಪ್ರೌಢಶಾಲೆ, ಕಿನ್ನಿಗೋಳಿ

 

 

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]