Dec 08: ದಿನಾಂಕ 01.12.2023ರ ಶುಕ್ರವಾರದಂದು ಬೆಳಿಗ್ಗೆ ಪಶ್ಚಿಮ ವಲಯದ ಪ್ರಾಂತ್ಯಾಧಿಕಾರಿಗಳಾದ ಭಗಿನಿ ಸ್ಯಾಲಿರವರು ಬೆಥನಿ ಪ್ರೌಢ ಶಾಲೆಗೆ ಭೇಟಿ ನೀಡಿದರು. ಶಾಲೆಯ ಎಲ್ಲ ಶಿಕ್ಷಕರಿಗೊಂದು ಸಂಭ್ರಮದ ವಿಷಯವಾಗಿತ್ತು. ಅವರನ್ನು ಕುರಿತು ಪ್ರಾರ್ಥನೆ, ಸ್ವಾಗತ ನೃತ್ಯಗಳೊಂದಿಗೆ ಮೌಲ್ಯಯುತ ನಾಟಕವಿರುವ ಚಿಕ್ಕದಾದ ಚೊಕ್ಕದಾದ ಕಾರ್ಯಕ್ರಮವನ್ನು ಮಾಡಲಾಯಿತು.

ಕಾರ್ಯಕ್ರಮ ಮಾಡಿದ ನೃತ್ಯ ಮತ್ತು ನಾಟಕವನ್ನು ಅವರು ಮೆಚ್ಚಿ ಮಕ್ಕಳಿಗೆ ಅಭಿನಂದಿಸಿದರು, ಜೊತೆಗೆ ಅದಕ್ಕೆ ಕಾರಣೀಕರ್ತರಾದ ಶಿಕ್ಷಕರಿಗೂ ಕೂಡ ಅಭಿನಂದನೆಗಳನ್ನು ಸಲ್ಲಿಸಿದರು. ಅಲ್ಲದೆ ಮಕ್ಕಳಿಗೆ ಹಲವು ಪ್ರಚಲಿತ ಘಟನೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಮೌಲ್ಯಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರಚೋದಿಸಿದರು.

ಶಾಲೆಯ ಎಲ್ಲಾ ಶಿಕ್ಷಕರನ್ನು ಭೇಟಿಮಾಡಿ ಆಡಳಿತ ಮಂಡಳಿಯವರ ಮನೋಭಾವಗಳನ್ನು ಶಿಕ್ಷಕರ ಜೊತೆ ಹಂಚಿಕೊಂಡರು. ಮುಂದಿನ ವರ್ಷ ಶಿಕ್ಷಕರ ಸಮ್ಮೇಳನವಿರುತ್ತದೆ. ನಾವು ಸೂಚಿಸಿದಂತೆ ನೀವು ಆ ಸ್ಥಳಕ್ಕೆ ಬರಬೇಕಾಗುತ್ತದೆ ಎಂದು ಹೇಳಿದರು.

 

 

 

 

 

 

 

ಶ್ರೀಮತಿ ಅರ್ಚನಾ, ಸಹ ಶಿಕ್ಷಕಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

 

 

 

 

 

 

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]