Dec 18: ದಿನಾಂಕ 14.12.2023ರಂದು ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಪರೀಕ್ಷೆ ಬಗ್ಗೆ ತಿಳುವಳಿಕೆ ನೀಡಲು ಮಲ್ಲಿಕಾರ್ಜುನ ಸೇಡಂ, ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿಗಳು, ಕ್ಷೇತ್ರ ಶಿಕ್ಷಣ ಕಾರ್ಯಾಲಯ ಚಿತ್ತಾಪೂರ ಇವರು ನಮ್ಮ ಶಾಲೆಗೆ ಆಗಮಿಸಿದ್ದರು.

ಇವರು ಮಕ್ಕಳಿಗೆ ಪರೀಕ್ಷೆಯ ಭಯ ಇರದೇ ಧೈರ್ಯದಿಂದ ಚೆನ್ನಾಗಿ ಓದಿ ಪರೀಕ್ಷೆ ಎದುರಿಸಬೇಕೆಂದು ಹೇಳಿದರು. ವಿದ್ಯಾರ್ಥಿಗಳು 6 ವಿಷಯಗಳ ಅಭ್ಯಾಸ ವೇಳಾಪಟ್ಟಿಯನ್ನು ರಚಿಸಿಕೊಳ್ಳಬೇಕೆಂದು ಹೇಳಿದರು. ಓದದೇ ಇರುವ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನ ವಹಿಸಿ ಸಂಸ್ಕಾರವಂತರಾಗಬೇಕೆಂದು ಹೇಳಿದರು. ಬಡತನದ ಕೆಸರಿನಲ್ಲಿಯೇ ಸಾಧನೆ ಎಂಬ ಕಮಲ ಅರಳುತ್ತದೆ ಎಂದು ಹೇಳಿದರು.

ಈ ವರ್ಷ ನಕಲು ಮತ್ತು ಭಯ ಮುಕ್ತ ಪರೀಕ್ಷಾ ವ್ಯವಸ್ಥೆ ರೂಪಿಸಲಾಗಿದೆ. ಮೂರು ಹಂತದಲ್ಲಿ ಪರೀಕ್ಷೆ, ಮೂರು ಹಂತದಲ್ಲಿ ಉತ್ತೀರ್ಣ ಮತ್ತು ಅನುತ್ತೀರ್ಣರಾದ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಹೆಚ್ಚಿಸಿಕೊಳ್ಳಬಹುದೆಂದು ಹೇಳಿದರು. ಶಿಕ್ಷಣದ ಅತ್ಯದ್ಭುತ ಬಳಕೆಯ ರೂಪವೇ, ಸಾಧನೆ ಎಂದು ಹೇಳಿದರು.

 

 

 

ಶ್ರೀಮತಿ ಸುಷ್ಮಾ, ಸಹ ಶಿಕ್ಷಕಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]