June 14: ಸಂತ ಜೋಸೆಫರ ಆರ್ಫನೇಜ್ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನೇರವೇರಿಸಲಾಯಿತು. ಕಾರ್ಯಕ್ರಮದ ಅತಿಥಿಗಳಾಗಿ ಸ್ಥಳೀಯ ಗ್ರಾಮ ಪಂಚಾಯತಿಯ ಸದಸ್ಯರಾದ ಶ್ರೀ ಬಸಪ್ಪಾ ಬೀರಮುತ್ತಿಯವರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಶಿಕ್ಷಕಿ ವಂ. ಭಗಿನಿ ಲವೀನಾ ಬಿ.ಎಸ್. ಅವರು ಉಪಸ್ಥಿತರಿದ್ದರು. ಶಾಲಾ ಸಿಬ್ಬಂದಿಯವರು ಶಾಲಾ ಮುಖ್ಯದ್ವಾರದಿಂದ ವಾದ್ಯ ಸಂಗೀತದೊಂದಿಗೆ ಹಾಗೂ ಪುಷ್ಪಗುಚ್ಚ ನೀಡುವುದರ ಮುಖಾಂತರ ಗುಣಾತ್ಮಕ ಶೈಕ್ಷಣಿಕ ಬಲವರ್ಧನೆ ವರ್ಷದ ನೂತನ ಕಲಿಕೆಗಾಗಿ ಶಾಲೆಗೆ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಕನ್ನಡ ಭಾಷಾ ಪಂಡಿತರಾದ ಶ್ರೀ. ದಯಾನಂದ ಆರ್.ಹೆಚ್. ರವರು ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ಕಾರ್ಯಕ್ರಮದ ಅತಿಥಿಗಳು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಂ. ಭಗಿನಿ ಲವೀನಾ ಬಿ.ಎಸ್ ರವರು ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ಅಭ್ಯಾಸದಲ್ಲಿ ಮುಂದುವರಿದು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಹೊರಹೊಮ್ಮಬೆಕೆಂದು ವಿಶೇಷವಾಗಿ ಎಸ್. ಎಸ್. ಎಲ್.ಸಿ. ವಿದ್ಯಾರ್ಥಿಗಳಿಗೆ ಅವರ ಭವಿಷ್ಯಕ್ಕೆ ಶುಭವನ್ನು ಹಾರೈಸಿದರು.

 

 

 

 

ಶ್ರೀ ದಯಾನಂದ ಆರ್.ಹೆಚ್.
ಸಂತ ಜೋಸೆಫರ ಪ್ರೌಢಶಾಲೆ, ಸಂತಿಬಸ್ತವಾಡ

 

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]