July 02: ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಅವರಿಗೆಲ್ಲ ಬೇಕು ನಾಯಕರು ಎಂಬಂತೆ ನಮ್ಮ ಬೆಥನಿ ಪ್ರೌಢ ಶಾಲೆಯಲ್ಲಿ 2024-25ನೇ ಶೈಕ್ಷಣಿಕ ವರ್ಷದ ಮಂತ್ರಿಮಂಡಲದ ಸದಸ್ಯರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು. ಆಯ್ಕೆಯಾದ ಮಂತ್ರಿಗಳ ಶಪಥ ಗ್ರಹಣ ಕಾರ್ಯಕ್ರಮವನ್ನು ದಿ. 28.06.2024ರ ಶುಕ್ರವಾರ ಮಧ್ಯಾಹ್ನದ 2.00 ಗಂಟೆಗೆ ಸರಿಯಾಗಿ ನೆರವೇರಿಸಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಸ್ಥಾನವನ್ನು ವಿದ್ಯಾರಾಣಿ ಕಾನ್ವೆಂಟಿನ ಮುಖ್ಯಸ್ಥೆ ಸಿ.ಸ್ಯಾಂಡ್ರಾ ಹಾಗೂ ಹಳೆಯ ವಿದ್ಯಾರ್ಥಿ ಸಂಘದ ಸದಸ್ಯರಾದ ಶ್ರೀಯುತ ಅಮೂಲ ತ್ರೀಮಲ್ ಅವರು ಆಗಮಿಸಿದ್ದರು. ಜೊತೆಗೆ ಕಾರ್ಯಕ್ರಮದ ಬೆನ್ನೆಲುಬಾಗಿ ನಮ್ಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿ.ಕವಿತಾ ಹಾಗೂ ಹಿರಿಯ ಶಿಕ್ಷಕಿಯಾಗಿರುವ ಸಿ.ನೀನಾ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮವು ಪ್ರಾರ್ಥನೆ ಗೀತೆಯೊಂದಿಗೆ ಪ್ರಾರಂಭವಾಗಿ ಸ್ವಾಗತ ನೃತ್ಯ ಭಾಷಣ, ಉದ್ಘಾಟನೆ ಮಾಡುವುದರ ಮೂಲಕ ಮುಂದುವರೆಯಿತು. ಅಲ್ಲದೆ ಎಲ್ಲರ ಮನಸೆಳೆಯುವ ನಾಯಕತ್ವದ ಗುಣಲಕ್ಷಣಗಳನ್ನು ಎತ್ತಿ ತೋರಿಸುವಂತಹ ಒಂದು ನಾಟಕವನ್ನು ಪ್ರದರ್ಶಿಸಲಾಯಿತು.

ನಂತರ ಆಯ್ಕೆಯಾದ ಎಲ್ಲ ಮಂತ್ರಿಮಂಡಲದ ಸದಸ್ಯರುಗಳಿಗೆ ಅತಿಥಿ ಗಣ್ಯರು ಹೂಗುಚ್ಛ ನೀಡುವುದರ ಮೂಲಕ ಅಭಿನಂದನೆ ಸಲ್ಲಿಸಿದರು. ಜೊತೆಗೆ ಅವರ ಶಪಥ ಗ್ರಹಣ ಕಾರ್ಯಕ್ರಮವು ನೆರವೇರಿತು.

ಅತಿಥಿ ಗಣ್ಯರಲ್ಲಿ ಶ್ರೀಯುತ ಅಮೂಲರವರು ಎಲ್ಲ ಮಕ್ಕಳಿಗೆ ಶುಭಕೋರಿದರು. ಸಿ.ಸ್ಯಾಂಡ್ರಾರವರು ಅವರ ಜವಾಬ್ದಾರಿ ಕೇವಲ ಒಂದೆರಡು ದಿನದ್ದಲ್ಲ, ಇಡೀ ವರ್ಷ ನಿಭಾಯಿಸಬೇಕು. ಅವರ ಜೊತೆಗೆ ಎಲ್ಲ ವಿದ್ಯಾರ್ಥಿಗಳು ಸಹಕರಿಸಬೇಕೆಂದು ಹೇಳುತ್ತ "ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತ್ತೇ?” ಎಂಬ ನಾಣ್ಣುಡಿಯನ್ನು ಹೇಳುತ್ತ ಮಕ್ಕಳಲ್ಲಿ ಪ್ರಪ್ರಥಮವಾಗಿ ಶಿಸ್ತು ಎಂಬ ಮೌಲ್ಯ ಮೈಗೂಡಿರಬೇಕು ಎಂಬ ಕಿವಿಮಾತನ್ನು ಹೇಳಿದರು. ಮುಖ್ಯೋಪಾಧ್ಯಾಯಿನಿ ಸಿ.ಕವಿತಾ ನಾಯಕತ್ವದ ಗುಣಲಕ್ಷಣಗಳನ್ನು ಅವರದೆ ಆದ ಶೈಲಿಯಲ್ಲಿ ಕವನದ ಮೂಲಕ ವ್ಯಕ್ತಪಡಿಸಿದರು. ನಿರೂಪಕರಾದ ಶ್ರೀಯುತ ವಿಶ್ವನಾಥ ಕುಂಬಾರ ಅವರು ವಂದನಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

 

 

 

 

 

 

 

ಕುಮಾರಿ ಆಶಾ, ಸಹಶಿಕ್ಷಕಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ  

 

 

 

 

 

 

 

 

 

 

 

 

 

 

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]