Apr 4: ಸಂಸ್ಥಾಪಕರಾದ ಪೂಜ್ಯ ಗುರು ಖ.ಈ.ಅ ಯವರ ನೆಚ್ಚಿನ ತಾಣವಾದ ರೋಸಾ ಮಿಸ್ತಿಕಾವು ವಿದ್ಯಾಕ್ಷೇತ್ರದಲ್ಲಿ ಪ್ರಗತಿಯತ್ತ ಮುನ್ನಡೆಯುತ್ತಿರುವುದು ಸಂತಸ, ಅಭಿಮಾನದ ವಿಷಯವಾಗಿದೆ. ವಿದ್ಯೆಯ ಜೊತೆಗೆ ಜೀವನ ಮೌಲ್ಯಗಳನ್ನು ಬೋದಿಸಿ, ನಾಳಿನ ಜನಾಂಗವನ್ನು ರೂಪಿಸುವಾಗ, ಸಂಸ್ಥಾಪಕರ ಆದರ್ಶ ಗುಣಗಳಲ್ಲಿ ಒಂದಾದ ಶ್ರಮ ಗೌರವ ಮತ್ತು ದುಡಿಮೆಯ ಘನತೆಯ ಮಹತ್ವವು ರೋಸಾ ಮಿಸ್ತಿಕಾ ಪ್ರಾ. ಶಾಲಾ ಆವರಣದಲ್ಲಿ ಶಿಕ್ಷಕಿ ಭ.ಪ್ರಶಾಂತಿ ಹಾಗೂ ಸಹಶಿಕ್ಷಕಿಯರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಲಭಿಸುತ್ತಿದೆ ಹಾಗೂ ಶಿಕ್ಷಕರ ಸಹಕಾರದಿಂದ ನೆಟ್ಟು ಪೋಷಿಸಿದ ಫಲಭರಿತ ಪಪ್ಪಾಯಿ ಗಿಡಗಳು, ಬಳ್ಳಿ ತುಂಬಿದ ತೊಂಡೆಕಾಯಿಗಳು, ಚಪ್ಪರ ಸುತ್ತಿದ ಬಸಳೆ, ಮರ ತುಂಬಾ ದೀವಿ ಹಲಸು, ಹುಳಿಯಾದರೂ ರುಚಿಯಾದ ಜುಂಬಿಲಿಕಾಯಿ, ಸ್ವಾದಿಷ್ಟವಾದ ಬಾಳೆಗೊನೆ, ಪರಿಮಳಯುಕ್ತ ಕರಿಬೇವು ಇವುಗಳೆಲ್ಲಾ ಹಚ್ಚಹಸುರಾಗಿ ಸಮೃದ್ಧವಾಗಿ ಎಲ್ಲರನ್ನೂ ತನ್ನತ್ತ ಕರೆಯುತ್ತಿದೆ. ಮುಖ್ಯ ಶಿಕ್ಷಕಿ ಭಗಿನಿ ಪ್ರಶಾಂತಿ ಹಾಗೂ ಶಿಕ್ಷಕರ ತ್ಯಾಗ ಮತ್ತು ಪರಿಶ್ರಮದ ಫಲವೇ ಶಾಲಾ ಹಸಿರು ತೋಟವಾಗಿದೆ. ಇವರಿಂದ ಪ್ರೇರಿತರಾದ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಒಂದಲ್ಲ ಒಂದು ರೀತಿಯ ಗಿಡ ನೆಟ್ಟು ಪೋಷಿಸಿ ಪರಿಸರ ಸಂರಕ್ಷಣೆಯನ್ನು ಮಾಡುತ್ತಿದ್ದಾರೆ. ಇದೇ ಬೆಥನಿ ಮೌಲ್ಯಗಳ ಪ್ರತ್ಯಕ್ಷ ಅನುಷ್ಠಾನವಲ್ಲವೆ?

Sr Prashanthi BS

Rosa Mystica Hr Pry school, Kinnikambla

 

 

 

 

 

 

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]