Aug 26: ದಿನಾಂಕ 26.08.2017 ರಂದು ಸ್ಥಳೀಯ ಬೆಥನಿ ಪ್ರೌಢಶಾಲೆಯಲ್ಲಿ 2017-18ನೇ ಸಾಲಿನ ಶಿಕ್ಷಕ ಪಾಲಕರ ಸಂಘದ ಸಭೆಯನ್ನು ಹಾಗೂ ಸಂಘದ ಪುನರ್‍ರಚನೆ ಸಭೆಯನ್ನು ನಡೆಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಸಿಸ್ಟರ್ ಸೆಲಿನ ರವರು ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಮುಖ್ಯೋಪಾಧ್ಯಾಯಿನಿಯಾದ ಸಿಸ್ಟರ್ ಕವಿತಾ ಬಿಎಸ್ ಹಾಗೂ ಸಂಘದ ಉಪಧ್ಯಾಕ್ಷಕರಾದ ಶ್ರೀ ವಿನೋದ ಗುತ್ತೇದಾರ, ನಾಗರಾಜ ಬಂಕಲಗಿ, ಶಿವಕಾಂತ ಬೆಣ್ಣೂರ, ಶ್ರೀಮತಿ ಅನ್ನಪೂರ್ಣ ಹೊತಿನಮಡಿ ಉಪಸ್ಥಿತರಿದ್ದರು.  ಶಾಲೆಯ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಇಂತಹ ಸಂಘಗಳ ಅವಶ್ಯಕತೆ ಇದೆ ಎಂದು ಮುಖ್ಯೋಪಾಧ್ಯಾಯಿನಿಯವರು ತಿಳಿಸಿದರು. ಕಳೆದ ಎರಡು ವರ್ಷಗಳಲ್ಲಿ ನಡೆದ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

2017-18ನೇ ಸಾಲಿನ ಶಿಕ್ಷಕ -ಪಾಲಕರ ಸಂಘಕ್ಕೆ ಹೊಸ ಸದಸ್ಯರ ಆಯ್ಕೆಯಾಗಿ ಕಾರ್ಯಕಾರಿ ಸಮಿತಿಯ ರಚನೆಯಾಯಿತು.

Sr Kavitha BS, Headmistress
Bethany HS, Chittapur

 

 

 

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]