Oct 18: ಸರಕಾರದ ಆದೇಶದಂತೆ ಸ್ವಚ್ಛತಾ ಪಖ್ವಾಡ ಕಾರ್ಯಕ್ರಮದಡಿ ಸಮುದಾಯ ಸ್ವಚ್ಛತೆಯ ಅಂಗವಾಗಿ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಅಕ್ಟೋಬರ್ 14 ರಂದು ದರ್ಬೆ ವೃತ್ತದಿಂದ ಕಾವೇರಿಕಟ್ಟೆಯವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಹಾಗೂ ಅಂಗಡಿಗಳ ಮುಂಭಾಗದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.

ಲಿಟ್ಲ್ ಫ್ಲವರ್ ಶಾಲಾ ಮುಖ್ಯಶಿಕ್ಷಕಿ ಸಿಸ್ಟರ್ ಪ್ರಶಾಂತಿ ಡಿ’ಸೋಜಾ ಅವರ ನೇತೃತ್ವದಲ್ಲಿ ಪ್ರತಿ ಅಂಗಡಿ ಮಾಲಕರಲ್ಲಿ ಅಂಗಡಿಗೊಂದರಂತೆ ಕಸದ ಬುಟ್ಟಿಯನ್ನು ವ್ಯವಸ್ಥೆ ಮಾಡುವಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮನವಿ ಮಾಡಿದರು.
ಶಾಲಾ ರಕ್ಷಕ - ಶಿಕ್ಷಕ ಸಂಘದ ಉಪಾಧ್ಯಕ್ಷ ಸಂಶುದ್ದೀನ್ ಸಂಪ್ಯ, ಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಳ್, ವಿಲ್ಮಾ, ಡೋರತಿ, ಜೋಸ್ಲಿನ್, ಕ್ಲಾರಾ, ಲವೀನಾ, ಸೌಮ್ಯಾ, ರೇಷ್ಮಾ, ನಳಿನಿ, ಜ್ಯೋತಿಲಕ್ಷ್ಮೀ, ಮಮತಾ ಹಾಗೂ 350 ವಿದ್ಯಾರ್ಥಿಗಳು ಭಾಗವಹಿಸಿದ್ದರು.


Sr Prashanti BS, Headmistress
Little Flower Hr Pry School, Darbe, Puttur

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]