Nov 25: ವಾಮಂಜೂರಿನ ಅನುದಾನಿತ ಸೈಂಟ್‍ರೇಮಂಡ್ಸ್ ಪ್ರೌಢಶಾಲಾ ವಾರ್ಷಿಕ ಕ್ರೀಡಾಕೂಟವು ನವೆಂಬರ್ 23 ರಂದು ಜರಗಿತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕದ್ರಿ, ಶಿವಭಾಗ್ ಶಾಖೆ ಇಲ್ಲಿಯ ಹಿರಿಯ ಪ್ರಬಂಧಕ ಶ್ರೀ ಡೆರಿಕ್ ಸಿಕ್ವೇರಾ ಮುಖ್ಯ ಅತಿಥಿಗಳಾಗಿದ್ದು ಪಥ ಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ಧ್ವಜಾರೋಹಣ ನಿರ್ವಹಿಸಿ ಮಕ್ಕಳನ್ನುದ್ದೇಶಿಸಿ ಮಾತನಾಡಿದರು. ಶಾಲಾ ಸಂಚಾಲಕಿ ಸಿ.ಸಿಬಿಲ್ ಸಮಾರಂಭದ ಅಧ್ಯಕ್ಷತೆ ವಹಿಸಿ ಕ್ರೀಡಾ ಜ್ಯೋತಿ ಬೆಳಗಿಸಿ ಮಾತನಾಡಿ ಕ್ರೀಡಾ ಪಟುಗಳಿಗೆ ಶುಭಕೋರಿದರು. ಈ ಸಂದರ್ಭದಲ್ಲಿ ರಾಜ್ಯಮಟ್ಟದ ನೆಟ್‍ಬಾಲ್ ಪಂದ್ಯಾಟದಲ್ಲಿ ತೃತೀಯ ಸ್ಥಾನ ಪಡೆದ ದಕ್ಷಿಣ ಕನ್ನಡ ಜಿಲ್ಲಾ ತಂಡದ ಸದಸ್ಯ ಈ ಶಾಲಾ ವಿದ್ಯಾರ್ಥಿ 8ನೇ ತರಗತಿಯ ಕೆವಿನ್ ಪಿರೇರಾರನ್ನು ಅಧ್ಯಕ್ಷರು ಗೌರವಿಸಿದರು. ಕ್ರೀಡಾಕೂಟಕ್ಕೆ ದಾನ ನೀಡಿದ ವಿದ್ಯಾಥಿಗಳನ್ನೂ ಗೌರವಿಸಲಾಯಿತು. ತಿರುವೈಲ್ ಕ್ಲಸ್ಟರಿನ ಸಂಪನ್ಮೂಲ ವ್ಯಕ್ತಿ ಶ್ರೀಮತಿ ರೂಪಲತಾ, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಮಾರ್ಗರೆಟ್ ಡಿ’ ಸೋಜಾ ಮತ್ತುಕಾರ್ಯಕಾರಿ ಸಮಿತಿಯ ಸದಸ್ಯರು, ಸೈಂಟ್‍ರೇಮಂಡ್ ಸಹ ಸಂಸ್ಥೆಗಳ ಮುಖ್ಯಸ್ಥರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ರೋಶನಿ ಸರ್ವರನ್ನೂ ಸ್ವಾಗತಿಸಿದರು. ಕನ್ನಡ ಶಿಕ್ಷಕರಾದ ರಾಂ ಎಲ್ಲಂಗಳ ಅವರು ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಡೊನಾಲ್ಡ್ ಲೋಬೋ ವಂದಿಸಿದರು. ವಿವಿಧ ಆಟೋಟ ಸ್ಪರ್ಧೆಗಳು ನಡೆದವು.

Richard Alvares, Asst Teacher
St Raymond HS, Vamanjoor

 

 

 

 

 

 

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]