Dec 02: ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ಪುತ್ತೂರು - ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ  ಮಕ್ಕಳ ಹಬ್ಬ ಸಾಂಸ್ಕøತಿಕ ಕಲರವ ಕಾರ್ಯಕ್ರಮವು ದಿನಾಂಕ 23.11.2017 ಹಾಗೂ 24.11.2017ರಂದು ವಿಜೃಂಭಣೆಯಿಂದ ನಡೆಯಿತು. ಸೆಕ್ರೆಡ್ ಹಾರ್ಟ್ ಪದವಿ ಕಾಲೇಜು ಇಲ್ಲಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀಯುತ ಎಲಿಯಾಸ್ ಪಿಂಟೊ ಧ್ವಜಾರೋಹಣ ನೆರವೇರಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಮೂಹಿಕ ಕವಾಯತು ನಡೆಯಿತು. ನಂತರ ನಡೆದ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಶಾಲಾ ಸಂಚಾಲಕಿ ಭಗಿನಿ ಸರಿಟಾರವರು “ಸಂಭ್ರಮದ ಸಮಾರಂಭಕ್ಕೆ ಸಾಕ್ಷಿಯಾದ ಸರ್ವರಿಗೂ ಆಡಳಿತ ಮಂಡಳಿಯ ವತಿಯಿಂದ ಕೃತಜ್ಞತೆಗಳನ್ನು ಸಮರ್ಪಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.” ವೇದಿಕೆಯಲ್ಲಿ ಸೆಕ್ರೆಡ್ ಹಾರ್ಟ್ ಪದವಿ ಕಾಲೇಜು ಇಲ್ಲಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀಯುತ ಎಲಿಯಾಸ್ ಪಿಂಟೊ. ಬಿ.ಐ.ಇ.ಆರ್.ಟಿ ಶ್ರೀಮತಿ ತನುಜಾ ಎಮ್ ಝೇವಿಯರ್ ಡಿ’ಸೋಜ, ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಶಾಲಿನಿ ಬಿ ಶೆಟ್ಟಿ, ಹಿರಿಯ ವಿದ್ಯಾರ್ಥಿ, ಯುವ ಉದ್ಯಮಿ ಶ್ರೀಯುತ ರಾಕೇಶ್ ಗ್ಲೆನ್ ರೊಡ್ರಿಗಸ್,  ರಕ್ಷಕ - ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಯುತ ಸಂಶುದ್ದೀನ್ ಸಂಪ್ಯ, ಸುರಕ್ಷಾ ಸಮಿತಿಯ ಅಧ್ಯಕ್ಷರಾದ ಶ್ರೀಯುತ ನೇಮಾಕ್ಷ ಸುವರ್ಣ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಪ್ರಶಾಂತಿ ಬಿ.ಎಸ್ ಉಪಸ್ಥಿತರಿದ್ದರು. ಶಾಲೆಯಲ್ಲಿ ಹಮ್ಮಿಕೊಂಡ ಕ್ರೀಡೆ ಹಾಗೂ ವಿವಿಧ ಶೈಕ್ಷಣಿಕ ಸ್ಫರ್ದೆಗಳಲ್ಲಿ ವಿಜೇತರಾದ 600 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.  ಶಾಲಾ ವಿದ್ಯಾರ್ಥಿಗಳು ಸ್ವಾಗತ ನೃತ್ಯವನ್ನು ಪ್ರಸ್ತುತಪಡಿಸಿದರು.  ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಪ್ರಶಾಂತಿ ಬಿ.ಎಸ್ ಸ್ವಾಗತಿಸಿ, ಶ್ರೀಮತಿ ಜೊಸ್ಲಿನ್ ಪಾೈಸ್ ವಂದಿಸಿ, ಶ್ರೀಮತಿ ವಿಲ್ಮಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.  ಮಧ್ಯಾಹ್ನ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು.


ದಿನಾಂಕ 24.11.2017 ರಂದು ಮಕ್ಕಳ ಹಬ್ಬ ಸಾಂಸ್ಕøತಿಕ ಕಲರವ ಕಾರ್ಯಕ್ರಮವು ಬೆಥನಿ ಸಂಸ್ಥೆಯ ಮಂಗಳೂರು ಪ್ರಾಂತ್ಯದ ಪ್ರಾಂತೀಯ ಮುಖ್ಯಸ್ಥೆಯ ಸಲಹೆಗಾರರಲ್ಲಿ ಒಬ್ಬರಾದÀ ವಂದನೀಯ ಭಗಿನಿ ಶುಭ ಬಿ.ಎಸ್ ರವರ ಅದ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಭಗಿನಿ ವಂದನೀಯ ಶುಭ ಬಿ.ಎಸ್ “ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಶಿಕ್ಷಣವು  ಕೇವಲ ತರಗತಿಯ ನಾಲ್ಕು ಗೋಡೆಗೆ, ಸೀಮಿತವಾಗದೆ ಬದುಕಿನ ಎಲ್ಲಾ ಆಯಾಮದ ಕ್ಷೆತ್ರಗಳಲ್ಲಿ ಶಿಕ್ಷಣ ನೀಡಬೇಕಾಗಿದೆ. ಆ ನಿಟ್ಟಿನಲ್ಲಿ ಬದುಕಿನ ಶಿಕ್ಷಣ ನೀಡುವುದರಲ್ಲಿ ಲಿಟ್ಲ್ ಫ್ಲವರ್ ಶಾಲೆ ಯಶಸ್ಸನ್ನು ಕಂಡಿದೆ ಆ ಕಾರಣದಿಂದ ಕನ್ನಡ ಮಾಧ್ಯಮವಾದರೂ ಅತೀ ಹೆಚ್ಚು  ವಿದ್ಯಾರ್ಥಿಗಳನ್ನು ಹೊಂದಿದೆ ಎಂದರು.” ವೇದಿಕೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ದ.ಕ. ಮಂಗಳೂರು ಇದರ  ಉಪನಿರ್ದೇಶಕರಾದ  ಶ್ರೀಯುತ  ಶಿವರಾಮಯ್ಯ ವೈ, ಯುವ ಉದ್ಯಮಿಗಳಾದ ಶ್ರೀಯುತ ಶ್ರೀ ಅಶೋಕ್ ಕುಮಾರ್ ರೈ,  ರೈ ಎಸ್ಟೇಟ್ ಕೋಡಿಂಬಾಡಿ,  ಬಿಲ್ಲವ ಸೇವಾ ಸಂಘ (ರಿ) ಪುತ್ತೂರು. ಇದರ ಅಧ್ಯಕ್ಷರಾದ ಶ್ರೀಯುತ ಜಯಂತ ನಡುಬೈಲು, ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ)ದ ಜಿಲ್ಲಾಧ್ಯಕ್ಷರಾಗಿರುವ ಶ್ರೀಯುತ ಮಹಮ್ಮದ್ ಕುಕ್ಕುವಳ್ಳಿ,   ಆನಂದಾಶ್ರಮ ಸೇವಾ ಟ್ರಸ್ಟ್(ರಿ) ಪುತ್ತೂರು ಇದರ ಅಧ್ಯಕ್ಷರಾಗಿರುವ ಶ್ರೀಮತಿ ಡಾ. ಪಿ. ಗೌರಿ ಪೈ,  ಜಯಕರ್ನಾಟಕ ಯುವ ಘಟÀಕದ ಜಿಲ್ಲಾಧ್ಯಕ್ಷರಾಗಿರುವ ಶ್ರೀಯುತ  ಸಹಜ್ ರೈ ಬಳ್ಳಜ್ಜ, ಹೈಲ್ಯಾಂಡ್ ಹಾಸ್ಪಿಟಲ್ ಮಂಗಳೂರು ಇದರ ಆರ್ಥೊ ಕನ್ಸಲ್ಟೆಂಟ್ ಮತ್ತು  ಸ್ಪೈನ್ ಸರ್ಜನ್ ಹಾಗೂ ಹಿರಿಯ ವಿದ್ಯಾರ್ಥಿಯಾಗಿರುವ   ಡಾ. ಹಾಶಿರ್ ಸಫ್ವಾನ್ ಯು,  ಶಾಲಾ ಸಂಚಾಲಕಿಯಾದ ಭಗಿನಿ ಸರಿಟಾ ಬಿ.ಎಸ್, ರಕ್ಷಕ - ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಯುತ ಸಂಶುದ್ದೀನ್ ಸಂಪ್ಯ, ಸುರಕ್ಷಾ ಸಮಿತಿಯ ಅಧ್ಯಕ್ಷರಾದ ಶ್ರೀಯುತ ನೇಮಾಕ್ಷ ಸುವರ್ಣ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಪ್ರಶಾಂತಿ ಬಿ.ಎಸ್ ಉಪಸ್ಥಿತರಿದ್ದರು. ಪ್ರಸ್ತುತ ಶೈಕ್ಷಣಿಕ ವರ್ಷದ ಕ್ರೀಡಾ ಕೂಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕುಮಾರಿ ಜೋಯ್ಲಿನ್ ಮರಿಯ ಡಿ’ಸೋಜ, ಕುಮಾರಿ ಪವಿತ್ರಾ ಕೆ ಭಟ್,  ಜ್ಞಾನ ಮಂದಾರ ಅಕಾಡೆಮಿ ಬೆಂಗಳೂರು ಇವರು ನೀಡಿದ ರಾಜ್ಯ ಮಟ್ಟದ ಅರಳು ಮಲ್ಲಿಗೆ ಪ್ರಶಸ್ತಿಯನ್ನು ಪಡೆದುಕೊಂಡ ಕುಮಾರಿ ಅಶ್ವಿನಿ ಪೈ, ರಾಜ್ಯಮಟ್ಟದ ಕಲಾಶ್ರಯ ಪ್ರಶಸ್ತಿ ಪಡೆದುಕೊಂಡಿರುವ ಕುಮಾರಿ ಸಂಪನ್ನಲಕ್ಷ್ಮೀ ಇವರನ್ನು ಸನ್ಮಾನಿಸಲಾಯಿತು. ತ್ರೋಬಾಲ್ ಮತು ಕಬಡ್ಡಿ ಪಂದ್ಯಾಟದಲ್ಲಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ, ಬೆಥನಿ ಸಮಾಜ ಸೇವಾ ಪ್ರತಿಷ್ಠಾನ ನಡೆಸಿದ ಮೌಲ್ಯ ಶಿಕ್ಷಣ, ನೀತಿ ಶಿಕ್ಷಣ ಹಾಗೂ ಕಲಿಕಾ ಸಾಮಥ್ರ್ಯದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ, ಉತ್ತಮ ನಾಯಕತ್ವ ಹಾಗೂ ಸರ್ವಾಂಗೀಣ ನಿರ್ವಹಣೆ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ದಾನಿಗಳ ದತ್ತು ನಿಧಿಗೆ ಸಂಭಂಧಪಟ್ಟ ವಿದ್ಯಾರ್ಥಿಗಳಿಗೆ  ಬಹುಮಾನ ವಿತರಿಸಲಾಯಿತು. ಬಳಿಕ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ 780 ವಿದ್ಯಾರ್ಥಿಗಳು ನಾಟಕ, ನೃತ್ಯ, ಗೀತಗುಚ್ಛ ಹಾಗೂ ಪಿರಮಿಡ್‍ಗಳಲ್ಲಿ ಭಾಗವಹಿಸಿದರು. ರಕ್ಷಕ - ಶಿಕ್ಷಕ ಸಂಘದ ಎಲ್ಲಾ ಪಧಾದಿಕಾರಿಗಳು ಶಿಸ್ತು ಬದ್ಧ ಕಾರ್ಯಕ್ರಮದ ನಿರ್ವಹಣೆಗೆ ಸಹಕರಿಸಿದರು. ಶಾಲಾ ಸಂಚಾಲಕಿ ಭಗಿನಿ ಸರಿಟಾರವರು ಸ್ವಾಗತಿಸಿ, ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಪ್ರಶಾಂತಿ ಬಿ.ಎಸ್ ವಂದಿಸಿ, ಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

Sr Prashanthi BS, Headmistress
Little Flower Hr Pry School, Puttur
                              

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]